Publish Date: Sun, 09 Feb 2020 (18:52 IST)
Updated Date: Sun, 09 Feb 2020 (18:54 IST)
ಸಿಡ್ನಿ: ಬುಶ್ ಫೈರ್ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು ಏರ್ಪಡಿಸಲಾಗಿದ್ದ ಚ್ಯಾರಿಟಿ ಪಂದ್ಯದಲ್ಲಿ ವಿಶ್ವದ ದಿಗ್ಗಜ ಕ್ರಿಕೆಟಿಗರು ಕ್ರಿಕೆಟ್ ಆಡಿದ್ದಾರೆ. ಅದರಲ್ಲೂ ಐದು ವರ್ಷಗಳ ಬಳಿಕ ಸಚಿನ್ ತೆಂಡುಲ್ಕರ್ ಮೈದಾನದಲ್ಲಿ ಬ್ಯಾಟ್ ಮಾಡಿದ್ದನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.
ಸಚಿನ್ ಬ್ಯಾಟಿಂಗ್ ವಿಡಿಯೋವನ್ನು ಐಸಿಸಿ ತನ್ನ ಟ್ವಿಟರ್ ಪೇಜ್ ನಲ್ಲಿ ಹಾಕಿದ್ದೇ ತಡ, ಅಸಂಖ್ಯಾತ ಅಭಿಮಾನಿಗಳು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
ನಮ್ಮ ಬಾಲ್ಯದ ದಿನಗಳು ನೆನಪಾದವು ಎಂದು ಹಲವರು ಕಾಮೆಂಟ್ ಮಾಡಿದರೆ ಮತ್ತೆ ಕೆಲವರು ನಮಗೆ ಅಳುವೇ ಬಂತು ಎಂದು ಇನ್ನು ಕೆಲವರು ಭಾವುಕರಾಗಿ ಬರೆದುಕೊಂಡಿದ್ದಾರೆ.