Select Your Language

Notifications

webdunia
webdunia
webdunia
webdunia

ನ್ಯೂಜಿಲೆಂಡ್ ಸರಣಿ ಬಿಟ್ಟುಕೊಟ್ಟ ಟೀಂ ಇಂಡಿಯಾ

ನ್ಯೂಜಿಲೆಂಡ್ ಸರಣಿ ಬಿಟ್ಟುಕೊಟ್ಟ ಟೀಂ ಇಂಡಿಯಾ
ಆಕ್ಲೆಂಡ್ , ಶನಿವಾರ, 8 ಫೆಬ್ರವರಿ 2020 (15:42 IST)
ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು 22 ರನ್ ಗಳಿಂದ ಗೆದ್ದ ನ್ಯೂಜಿಲೆಂಡ್ ಸರಣಿ ತನ್ನದಾಗಿಸಿಕೊಂಡಿದೆ.


ಈಗಾಗಲೇ ಟಿ20 ಸರಣಿ ಸೋತಿದ್ದ ನ್ಯೂಜಿಲೆಂಡ್ ಗೆ ಏಕದಿನ ಸರಣಿಯನ್ನು ತನ್ನ ಕೈವಶ ಮಾಡಿಕೊಳ್ಳುವ ಹಪಹಪಿಯಿತ್ತು. ಅದನ್ನು ಅತಿಥೇಯ ಪೂರೈಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 273 ರನ್ ಮಾಡಿತ್ತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭದಲ್ಲೇ ಮಯಾಂಕ್ ಅಗರ್ವಾಲ್ ವಿಕೆಟ್ ರೂಪದಲ್ಲಿ ಆಘಾತ ಸಿಕ್ಕಿತ್ತು. ಚೇಸಿಂಗ್ ವೀರ ಖ್ಯಾತಿಯ ನಾಯಕ ಕೊಹ್ಲಿ ಕೂಡಾ ನಿಧಾನಗತಿಯ ಬ್ಯಾಟಿಂಗ್ ನಡೆಸಿ ಕೇವಲ 15 ರನ್ ಗೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಐಯರ್ ಬಿಟ್ಟರೆ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳಲ್ಲಿ ಹೋರಾಟವೇ ಕಾಣಲಿಲ್ಲ. ಕೆಳ ಕ್ರಮಾಂಕದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಕೊನೆಯವರೆಗೂ ಹೋರಾಡಿ 55 ರನ್ ಗೆ ವಿಕೆಟ್ ಒಪ್ಪಿಸಿದರೆ, ವೇಗಿ ನವದೀಪ್ ಸೈನಿ 45 ರನ್ ಗಳಿಸಿ ಸಾಥ್ ನೀಡಿದರು. ಆದರೂ ಇವರ ಹೋರಾಟ ಜಯದ ಹಾದಿ ಸುಗಮವಾಗಿಸಲಿಲ್ಲ. ಬದಲಿಗೆ ಟೀಂ ಇಂಡಿಯಾ 48.3 ಓವರ್ ಗಳಲ್ಲಿ 251 ರನ್ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ನ್ಯೂಜಿಲೆಂಡ್ ಏಕದಿನ: ಟೀಂ ಇಂಡಿಯಾಕ್ಕೆ 274 ಗೆಲ್ಲಲು ರನ್ ಗುರಿ