Publish Date: Sat, 08 Feb 2020 (09:24 IST)
Updated Date: Sat, 08 Feb 2020 (09:28 IST)
ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ಏಕದಿನ ಮತ್ತು ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಕರ್ನಾಟಕ ಮೂಲದ ಕ್ರಿಕೆಟಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ನಡುವಿನ ಸ್ನೇಹ ಎಂತಹದ್ದು ಎಂದು ಎಲ್ಲರಿಗೂ ಗೊತ್ತು.
ಈ ಗೆಳೆಯರು ಜತೆಗೇ ಕ್ರಿಕೆಟ್ ಆಡುವ ಅವಕಾಶ ಸಿಕ್ಕ ಮೇಲೆ ಕೇಳಬೇಕೆ? ಇಬ್ಬರೂ ಜತೆಯಾಗಿರುವ ಅವಕಾಶವನ್ನು ರಾಹುಲ್ ಮತ್ತು ಮಯಾಂಕ್ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ.
ಎರಡನೇ ಏಕದಿನಕ್ಕೆ ಮೊದಲು ಸಿಕ್ಕ ಬಿಡುವಿನ ವೇಳೆಯಲ್ಲಿ ಮಯಾಂಕ್ ಜತೆ ಹೊರಗಡೆ ಸುತ್ತಾಟ ನಡೆಸಿರುವ ರಾಹುಲ್ ಮಸ್ತ್ ಮಜಾ ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.