Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಟಿಮ್ ಸೌಥಿ-ವಿರಾಟ್ ಕೊಹ್ಲಿ ಕಾಳಗ: ಕೊನೆಗೆ ಗೆದ್ದವರು ಯಾರು?!

webdunia
  • facebook
  • twitter
  • whatsapp
share
ಶನಿವಾರ, 8 ಫೆಬ್ರವರಿ 2020 (15:55 IST)
ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಅತಿಥೇಯ ನ್ಯೂಜಿಲೆಂಡ್ ಪಾಲಾಗಿದೆ. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆದ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ದಾಖಲೆ ಮಾಡಿದ್ದಾರೆ.

 
ಒಟ್ಟಾರೆ ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ ಕೊಹ್ಲಿ ವಿಕೆಟ್ ನ್ನು ಒಂಭತ್ತನೇ ಬಾರಿಗೆ ಮತ್ತು ಏಕದಿನ ಮಾದರಿಯಲ್ಲಿ ಆರನೇ ಬಾರಿಗೆ ಕಬಳಿಸಿದ ಸೌಥಿ ಈ ಮೂಲಕ ಕೊಹ್ಲಿ ವಿಕೆಟ್ ನ್ನು ಅತೀ ಹೆಚ್ಚು ಬಾರಿ ಪಡೆದ ಇಂಗ್ಲೆಂಡ್ ನ ಜೇಮ್ಸ್ ಆಂಡರ್ಸನ್ ಮತ್ತು ಗ್ರೇಮ್ ಸ್ವಾನ್ ಸಾಲಿಗೆ ಸೇರಿದ್ದಾರೆ.

ಕೊಹ್ಲಿ ಈ ಪಂದ್ಯದಲ್ಲಿ 15 ರನ್ ಗೆ ಸೌಥಿಗೆ ವಿಕೆಟ್ ಒಪ್ಪಿಸಿದ್ದರು. ನ್ಯೂಜಿಲೆಂಡ್ ತಂಡದ ಪ್ರಮುಖ ವೇಗಿಯಾಗಿರುವ ಟಿಮ್ ಸೌಥಿ ಈ ಸಾಧನೆ ಮಾಡುವುದರ ಜತೆಗೆ ಸರಣಿ ಗೆಲುವಿನಲ್ಲೂ ನಿರ್ಣಾಯಕ ಪಾತ್ರವಹಿಸಿದರು.

Share this Story:
  • facebook
  • twitter
  • whatsapp

Follow Webdunia Hindi

ಮುಂದಿನ ಸುದ್ದಿ

webdunia
ನ್ಯೂಜಿಲೆಂಡ್ ಸರಣಿ ಬಿಟ್ಟುಕೊಟ್ಟ ಟೀಂ ಇಂಡಿಯಾ