Select Your Language

Notifications

webdunia
webdunia
webdunia
webdunia

ಕೀಪಿಂಗ್ ಗಷ್ಟೇ ಸೀಮಿತರಾದರೇ ಧೋನಿ?!

ಕೀಪಿಂಗ್ ಗಷ್ಟೇ ಸೀಮಿತರಾದರೇ ಧೋನಿ?!
ಸೆಂಚೂರಿಯನ್ , ಸೋಮವಾರ, 19 ಫೆಬ್ರವರಿ 2018 (08:33 IST)
ಸೆಂಚೂರಿಯನ್: ಟೀಂ ಇಂಡಿಯಾಕ್ಕೆ ಹೊಸ ಹೊಳಪು ತಂದಿತ್ತ ಧೋನಿ ಇತ್ತೀಚೆಗಿನ ದಿನಗಳಲ್ಲಿ ಬ್ಯಾಟಿಂಗ್ ಮಾಡುವುದೇ ಕಡಿಮೆ. ಅದಕ್ಕಿಂತ ಹೆಚ್ಚಿಗೆ ಹೇಳಬೇಕೆಂದರೆ ಹೊಸಬರ ದರ್ಬಾರ್ ನಲ್ಲಿ ಅವರಿಗೆ ಬ್ಯಾಟಿಂಗ್ ಅವಕಾಶವೇ ಸಿಗುತ್ತಿಲ್ಲ.
 

ಇದಕ್ಕೆ ಕಾರಣ ಧೋನಿ ಬ್ಯಾಟಿಂಗ್ ಕ್ರಮಾಂಕವೂ ಒಂದು. ಇದರಿಂದಾಗಿ ಇತ್ತೀಚೆಗೆ ಧೋನಿ ಆಡುವ ಬಳಗದಲ್ಲಿದ್ದರೂ ಕೇವಲ ಕೀಪಿಂಗ್ ಗೆ ಸೀಮಿತರಾಗಿದ್ದಾರೆ. ವಿಕೆಟ್ ಹಿಂದುಗಡೆ ಇದ್ದುಕೊಂಡೇ ಅವರು ಆಟವನ್ನು ನಿಯಂತ್ರಿಸುವುದರಲ್ಲಿ ಈಗಲೂ ನಿಸ್ಸೀಮರು. ಆದರೂ ಧೋನಿ ಬ್ಯಾಟಿಂಗ್ ಇಷ್ಟಪಡುವ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಇದಕ್ಕೆ ಮಾಜಿ ಕ್ರಿಕೆಟಿಗ ಸೆಹ್ವಾಗ್ ನಾಯಕ ಕೊಹ್ಲಿಗೆ ಒಂದು ಸಲಹೆ ನೀಡಿದ್ದಾರೆ. ಧೋನಿಗೆ ಆರನೇ ಕ್ರಮಾಂಕದ ಬದಲು ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ನೀಡಬೇಕು. ಇದರಿಂದಾಗಿ ಭಾರತದ ಮಧ್ಯಮ ಕ್ರಮಾಂಕಕ್ಕೆ ಬಲ ಸಿಗುತ್ತದೆ. ಧೋನಿ ಬೇಗ ಔಟಾಗಿಬಿಟ್ಟರೆ ಕೆಳ ಕ್ರಮಾಂಕ ಖಾಲಿಯಾಗುತ್ತದೆ ಎಂಬ ಲೆಕ್ಕಾಚಾರ ಕೊಹ್ಲಿಯದು.

ಆದರೆ ಹಾಗಲ್ಲ. ಧೋನಿಗೆ ಮೊದಲು ಅವಕಾಶ ಮಾಡಿಕೊಟ್ಟು, ಮನೀಶ್ ಪಾಂಡೆ ಅಥವಾ ಹಾರ್ದಿಕ್ ಪಾಂಡ್ಯ ಫಿನಿಶಿಂಗ್ ಕೆಲಸ ಮಾಡಲಿ ಎಂದು ಸೆಹ್ವಾಗ್ ಸಲಹೆ ಇತ್ತಿದ್ದಾರೆ. ಧೋನಿ ಸಿಕ್ಸರ್ ಗೆ ಕಾಯುತ್ತಿರುವ ಅಭಿಮಾನಿಗಳೂ ಇದನ್ನೇ ಬಯಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದ.ಆಫ್ರಿಕಾದಲ್ಲಿ ಅಡುಗೆ ಭಟ್ಟನನ್ನೇ ಬದಲಿಸಿದ ಟೀಂ ಇಂಡಿಯಾ! ಕಾರಣವೇನು ಗೊತ್ತಾ?