Select Your Language

Notifications

webdunia
webdunia
webdunia
webdunia

IPL 2025 Auction: ಭಾರತದ ಈ ಖ್ಯಾತ ತಾರೆಯರು ಅನ್ ಸೋಲ್ಡ್, ಇದರಲ್ಲಿ ಕನ್ನಡಿಗನೂ ಇದ್ದಾರೆ

IPL 2025 Auction, Unsold Cricter List, Mayank Agarwal,

Sampriya

ಸೌದಿ ಅರೇಬಿಯಾ , ಸೋಮವಾರ, 25 ನವೆಂಬರ್ 2024 (16:56 IST)
Photo Courtesy X
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್‌ 2025 ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಎರಡನೇ ದಿನವಾದ ಇಂದು ಕೂಡಾ ಭಾರತದ ಖ್ಯಾತ ತಾರೆಯರು ಅನ್‌ ಸೋಲ್ಡ್ ಆಗದೆ ಉಳಿದಿದ್ದಾರೆ. ಇದರ ಜತೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನ ಹಲವಾರು ದೊಡ್ಡ ಹೆಸರುಗಳು ಮಾರಾಟವಾಗದೆ ಉಳಿದಿವೆ.

ಭಾರತೀಯ ಆಟಗಾರರಾದ ಪೃಥ್ವಿ ಶಾ, ಅಜಿಂಕ್ಯ ರಹಾನೆ, ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತು ಶಾರ್ದೂಲ್ ಠಾಕೂರ್ ಆರಂಭಿಕ ಸುತ್ತಿನಲ್ಲಿ ಖರೀದಿಸಲು ಯಾರು ಆಸಕ್ತಿ ತೋರಿಸಲಿಲ್ಲ. ಇದರೊಂದಿಗೆ  ನ್ಯೂಜಿಲೆಂಡ್ ತಾರೆ ಕೇನ್ ವಿಲಿಯಮ್ಸನ್, ಗ್ಲೆನ್ ಫಿಲಿಪ್ಸ್ ಅವರನ್ನು ಖರೀದಿಸಲುಯಾರೊಬ್ಬರೂ ತಮ್ಮ ತಂಡದಲ್ಲಿ ಅವರನ್ನು ಹೊಂದಲು ಆಸಕ್ತಿ ತೋರಿಸಲಿಲ್ಲ. ಇವರ ಮೂಲ ಬೆಲೆ ₹2 ಕೋಟಿ ಆಗಿದೆ.

ಇಂದು ಸುತ್ತಿಗೆ ಹೋದ ಕ್ಯಾಪ್ಡ್ ಬ್ಯಾಟರ್‌ಗಳ ಪೈಕಿ, ವೆಸ್ಟ್ ಇಂಡೀಸ್ ಟಿ20ಐ ನಾಯಕ ರೋವ್‌ಮನ್ ಪೊವೆಲ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಅವರ ಮೂಲ ಬೆಲೆ 1.5 ಕೋಟಿಗೆ ಖರೀದಿಸಿತು. ಕಳೆದ ಋತುವಿನವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಫಾಫ್ ಡು ಪ್ಲೆಸಿಸ್ ಅವರನ್ನು 2 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್‌ ಖರೀದಿ ಮಾಡಿತು.

ಆಲ್‌ರೌಂಡರ್‌ಗಳ ಪೈಕಿ ಭಾರತದ ವೇಗಿ ಶಾರ್ದೂಲ್ ಠಾಕೂರ್ ಅಚ್ಚರಿಯ ರೀತಿಯಲ್ಲಿ ಮಾರಾಟವಾಗದೆ ಹೋದರೆ, ಇನ್ ಫಾರ್ಮ್ ವಾಷಿಂಗ್ಟನ್ ಸುಂದರ್ ಅವರನ್ನು ಗುಜರಾತ್ ಟೈಟಾನ್ಸ್ ಕೇವಲ 3.2 ಕೋಟಿಗೆ ಖರೀದಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಪ್ರವಾಸಕ್ಕೆ ಪತ್ನಿ ಮಾತ್ರನಾ, ಗರ್ಲ್ ಫ್ರೆಂಡ್ ಜೊತೆ ಬರಲು ಪರ್ಮಿಷನ್ ಕೇಳಿದ್ದ ವಿರಾಟ್ ಕೊಹ್ಲಿ