Select Your Language

Notifications

webdunia
webdunia
webdunia
webdunia

Ind vs Aus Test: ಕೊಹ್ಲಿ ಗುದ್ದಿದ್ದರ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಸ್ಯಾಮ್ ಕೋನ್‌ಸ್ಟಾಸ್‌

Ind vs Aus Test, Australian debutant Sam Konstas, Virat Kohli and Sam Konstas Fight

Sampriya

ನವದೆಹಲಿ , ಗುರುವಾರ, 26 ಡಿಸೆಂಬರ್ 2024 (15:44 IST)
Photo Courtesy X
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ನಲ್ಲಿ ನಡೆದ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಪರ ಪದಾರ್ಪಣೆ ಪಂದ್ಯವಾಡುತ್ತಿರುವ ಸ್ಯಾಮ್ ಕೋನ್‌ಸ್ಟಾಸ್‌ಗೆ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಪಂದ್ಯದ ವೇಳೆ ಡಿಕ್ಕಿಯಾದದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗಿದೆ.  

 ಆನ್-ಫೀಲ್ಡ್‌ನಲ್ಲಿ ವಿರಾಟ್ ಕೊಹ್ಲಿಯ ನಡವಳಿಕೆ ಮೇಲೆ ಅವರ ಪಂದ್ಯದ ಶುಲ್ಕದ 20% ದಂಡ ವಿಧಿಸಲಾಯಿತು ಮತ್ತು ಒಂದು ಡಿಮೆರಿಟ್ ಅಂಕವನ್ನು ನೀಡಲಾಯಿತು ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಇದೀಗ ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಏತನ್ಮಧ್ಯೆ ದಿನದಾಟದ ಬಳಿಕ ಮಾತನಾಡಿರುವ ಆಸ್ಟ್ರೇಲಿಯಾ ಆಟಗಾರ, ಕೊಹ್ಲಿ ತಮಗೆ ಭುಜ ತಾಗಿಸಿದ್ದು ಆಕಸ್ಮಿಕ ಎಂದು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೊಹ್ಲಿ ವರ್ತನೆಯನ್ನು ಹಿರಿಯ ಕ್ರಿಕೆಟಿಗರು ಟೀಕಿಸಿದ್ದಾರೆ. ಚೊಚ್ಚಲ ಪಂದ್ಯವಾಡುತ್ತಿರುವ ಕೋನ್‌ಸ್ಟಾಸ್‌ ಅವರೊಂದಿಗೆ ಕೊಹ್ಲಿ ಆ ರೀತಿ ನಡೆದುಕೊಳ್ಳಬಾರದಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಚಾನೆಲ್‌ 7ಗೆ ಪ್ರತಿಕ್ರಿಯಿಸಿದ ಸ್ಯಾಮ್‌ ಕೋನ್‌ಸ್ಟಾಸ್‌ ಅವರು, ವಿರಾಟ್‌ ಕೊಹ್ಲಿ ನನಗೆ ಗುದ್ದಿದ್ದು ಆಕಸ್ಮಿಕ. ಇದು ಕ್ರಿಕೆಟ್‌. ಒತ್ತಡದಲ್ಲಿದ್ದಾಗ ಇಂಥವೆಲ್ಲ ಆಗುತ್ತವೆ ಎಂದರು.

ನಾವಿಬ್ಬರೂ ಭಾವೋದ್ವೇಗಕ್ಕೊಳಗಾದೆವು ಎನಿಸುತ್ತದೆ. ನಾನು ಕೈಗವಸು ಸರಿಪಡಿಸಿಕೊಳ್ಳುತ್ತಿದ್ದೆ. ಆಗ ಭುಜಕ್ಕೆ ಭುಜ ತಾಗಿತು. ಆಗ ಏನಾಯಿತು ಎಂಬುದು ಸರಿಯಾಗಿ ಗೊತ್ತಿಲ್ಲ. ಕ್ರಿಕೆಟ್‌ನಲ್ಲಿ ಇಂಥ ಘಟನೆಗಳು ಸಾಮಾನ್ಯ' ಎಂದು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಕಿರಿಕ್ ಮಾಡಿರುವ ಸ್ಯಾಮ್ ಕಾನ್ ಸ್ಟಾನ್ ಕೊಹ್ಲಿ ಅಭಿಮಾನಿ