Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಕಿರಿಕ್ ಮಾಡಿರುವ ಸ್ಯಾಮ್ ಕಾನ್ ಸ್ಟಾನ್ ಕೊಹ್ಲಿ ಅಭಿಮಾನಿ

Kohli-Konstas

Krishnaveni K

ಮೆಲ್ಬೊರ್ನ್ , ಗುರುವಾರ, 26 ಡಿಸೆಂಬರ್ 2024 (15:24 IST)
Photo Credit: X
ಮೆಲ್ಬೊರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಯಾಮ್ ಕಾನ್ ಸ್ಟಾನ್ ನಡುವಿನ ಕಿರಿಕ್ ಭಾರೀ ವೈರಲ್ ಆಗಿದೆ.
 

ಔಟಾಗಿ ಮರಳುತ್ತಿದ್ದ 19 ವರ್ಷದ ಯುವ ಕ್ರಿಕೆಟಿಗ ಸ್ಯಾಮ್ ಕಾನ್ ಸ್ಟಾನ್ ಗೆ ಕೊಹ್ಲಿ ಬೇಕೆಂದೇ ಗುದ್ದಿ ವಾಗ್ವಾದ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಕೊಹ್ಲಿ 1 ಡಿ ಮೆರಿಟ್ ಪಾಯಿಂಟ್ ಮತ್ತು 20 ಶೇಕಡಾ ಪಂದ್ಯದ ಶುಲ್ಕ ದಂಡವಾಗಿ ವಿಧಿಸಲಾಗಿದೆ.

ಈ ಪ್ರಕರಣದ ಬಗ್ಗೆ ಕೊಹ್ಲಿಯನ್ನು ಸಾಕಷ್ಟು ಜನ ಟೀಕೆ ಮಾಡುತ್ತಿದ್ದಾರೆ. ಒಬ್ಬ ದಿಗ್ಗಜ ಕ್ರಿಕೆಟಿಗ ಯುವ ಕ್ರಿಕೆಟಿಗನ ಜೊತೆ ನಡೆದುಕೊಳ್ಳುವ ರೀತಿ ಇದಲ್ಲ. ಕೊಹ್ಲಿ ತಮ್ಮ ಫಾರ್ಮ್ ಕಂಡುಕೊಳ್ಳುವುದರ ಬಗ್ಗೆ ಯೋಚನೆ ಮಾಡಬೇಕು ಎಂದಿದ್ದರು.

ವಿಶೇಷವೆಂದರೆ ಕೊಹ್ಲಿ ಗುದ್ದಾಟ ನಡೆಸಿದ ಸ್ಯಾಮ್ ಕಾನ್ ಸ್ಟಾನ್ ಗೆ ಭಾರತೀಯ ಕ್ರಿಕೆಟಿಗರ ಪೈಕಿ ಯಾರು ಇಷ್ಟ ಎಂದು ಈ ಹಿಂದೊಮ್ಮೆ ಪ್ರಶ್ನೆ ಕೇಳಲಾಗಿತ್ತು. ಆಗ ಅವರು ಕೊಹ್ಲಿಯ ಹೆಸರು ಹೇಳಿದ್ದರು. ಕೊಹ್ಲಿಯ ಸಾಧನೆ ನಮಗೆ ನಿಜಕ್ಕೂ ಸ್ಪೂರ್ತಿ ಎಂದಿದ್ದರು. ವಿಪರ್ಯಾಸವೆಂದರೆ ತಮ್ಮ ಅಭಿಮಾನಿ ಕ್ರಿಕಿಟಿಗನ ಜೊತೆಗೇ ಕೊಹ್ಲಿ ಹೀಗೆ ನಡೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೇಟಿಯಾದ ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ಸ್ಪೆಷಲ್ ಗಿಫ್ಟ್ ನೀಡಿದ ರಜನಿಕಾಂತ್