Select Your Language

Notifications

webdunia
webdunia
webdunia
webdunia

ಧೋನಿ ಪತ್ನಿಯ ದೇಹಸಿರಿ ಬಗ್ಗೆ ಕಾಮೆಂಟ್ ಮಾಡಿದವರಿಗೆ ಅಭಿಮಾನಿಗಳ ಪ್ರತ್ಯುತ್ತರ

ಧೋನಿ ಪತ್ನಿಯ ದೇಹಸಿರಿ ಬಗ್ಗೆ ಕಾಮೆಂಟ್ ಮಾಡಿದವರಿಗೆ ಅಭಿಮಾನಿಗಳ ಪ್ರತ್ಯುತ್ತರ
ರಾಂಚಿ , ಬುಧವಾರ, 1 ಆಗಸ್ಟ್ 2018 (09:03 IST)
ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಪತ್ನಿ ಸಾಕ್ಷಿ ಧೋನಿ ಗ್ಲಾಮರಸ್ ಉಡುಪು ಧರಿಸಿ ಇನ್ ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ್ದಕ್ಕೆ ಟ್ರೋಲ್ ಗೊಳಗಾಗಿದ್ದಾರೆ.

ಆದರೆ ಸಾಕ್ಷಿ ಧೋನಿ ಪರವಾಗಿ ಅವರ ಅಭಿಮಾನಿಗಳೇ ಟ್ರೋಲಿಗರಿಗೆ ಪ್ರತ್ಯುತ್ತರ ನೀಡಿದ್ದಾರೆ. ಧೋನಿ ಪತ್ನಿ ಸಾಕ್ಷಿ ಹಿಂದೊಮ್ಮೆ ಇದೇ ರೀತಿ ಡ್ರೆಸ್ ವಿಚಾರಕ್ಕೆ ಟ್ರೋಲ್ ಗೊಳಗಾಗಿದ್ದರು.

ಇದೀಗ ಮತ್ತೆ ಇನ್ ಸ್ಟಾಗ್ರಾಂನಲ್ಲಿ ದೇಹ ಸಿರಿ ಕಾಣುವಂತಹ ಡ್ರೆಸ್ ತೊಟ್ಟಿದ್ದಕ್ಕೆ ದಯವಿಟ್ಟು ಈ ಫೋಟೋ ಡಿಲೀಟ್ ಮಾಡಿ. ನಿಮಗೆ ಈ ಡ್ರೆಸ್ ಸೂಟ್ ಆಗಲ್ಲ. ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿತ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಆದರೆ ಈ ಕಾಮೆಂಟ್ ಗಳಿಗೆ ಅಭಿಮಾನಿಗಳೇ ಪ್ರತ್ಯುತ್ತರ ನೀಡಿದ್ದು, ನಿಮಗೆ ಈ ಡ್ರೆಸ್ ಒಪ್ಪುತ್ತದೆ. ನಾವು ನಿಮ್ಮನ್ನು ಇಷ್ಟಪಡುತ್ತೇವೆ ಮತ್ತು ಗೌರವಿಸುತ್ತೇವೆ ಎಂದಿದ್ದಾರೆ. ಅಂತೂ ಡ್ರೆಸ್ ವಿಚಾರಕ್ಕೆ ಧೋನಿ ಪತ್ನಿ ಸುದ್ದಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಆಂಡರ್ಸನ್-ವಿರಾಟ್ ಕೊಹ್ಲಿ ಕದನಕ್ಕೆ ಸಿದ್ಧವಾಯಿತು ವೇದಿಕೆ!