Publish Date: Thu, 05 Dec 2019 (09:53 IST)
Updated Date: Thu, 05 Dec 2019 (09:55 IST)
ರಾಂಚಿ: ಸದ್ಯಕ್ಕೆ ಕ್ರಿಕೆಟ್ ನಿಂದ ಬಿಡುವು ಪಡೆದಿರುವ ಧೋನಿ ನಿವೃತ್ತಿಯಾಗುತ್ತಾರೋ, ಮುಂದೆ ಆಡ್ತಾರೋ ಎಂದೆಲ್ಲಾ ಹೊರಗಡೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಆದರೆ ಕ್ಯಾಪ್ಟನ್ ಕೂಲ್ ಮಾತ್ರ ಪಾರ್ಟಿ ಮಾಡಿಕೊಂಡು ತಮ್ಮ ವೈಯಕ್ತಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.
ಇದೀಗ ಧೋನಿ ತಮ್ಮ ಸ್ನೇಹಿತರೊಂದಿಗೆ ಪಾರ್ಟಿಯೊಂದರಲ್ಲಿ ಹಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧೋನಿ ಹಾಡುವ ವಿಡಿಯೋ ಅಪ್ ಲೋಡ್ ಮಾಡಿರುವ ಅವರ ಸ್ನೇಹಿತ ಗುಂಡಿಗೆ ಗಟ್ಟಿ ಇದ್ದರೆ ಮಾತ್ರ ಕೇಳಿಕೊಳ್ಳಿ ಎಂದು ತಮಾಷೆ ಮಾಡಿದ್ದಾರೆ.
ಧೋನಿ ಚೆನ್ನಾಗಿ ಹಾಡಲ್ಲ. ಆದರೆ ಸ್ನೇಹಿತರಿಗಾಗಿ ಹಿಂದಿ ಹಾಡೊಂದಕ್ಕೆ ಧ್ವನಿಗೂಡಿಸಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳೂ ದೇವರೇ ನನ್ನ ಕಿವಿಗೆ ಇದೇನು ಕೇಳುತ್ತಿದೆ. ಧೋನಿ ಪಾಜಿ ಮಾಡದೇ ಇರುವ ಕೆಲಸವೇನಾದರೂ ಉಳಿದಿದೆಯಾ ಎಂದೆಲ್ಲಾ ತಮಾಷೆ ಮಾಡಿದ್ದಾರೆ.