Select Your Language

Notifications

webdunia
webdunia
webdunia
webdunia

ಹೈದರಾಬಾದ್ ಗೆ ಬಂದಿಳಿದ ಟೀಂ ಇಂಡಿಯಾ ಆಟಗಾರರು

ಹೈದರಾಬಾದ್ ಗೆ ಬಂದಿಳಿದ ಟೀಂ ಇಂಡಿಯಾ ಆಟಗಾರರು
ಹೈದರಾಬಾದ್ , ಬುಧವಾರ, 4 ಡಿಸೆಂಬರ್ 2019 (09:43 IST)
ಹೈದರಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯವಾಡಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಕ್ರಿಕೆಟಿಗರು ಈಗಾಗಲೇ ಮುತ್ತಿನನಗರಿಗೆ ಬಂದಿಳಿದಿದ್ದಾರೆ.


ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಈ ಫೋಟೋ ಪ್ರಕಟಿಸಿದ್ದಾರೆ. ಕೆಎಲ್ ರಾಹುಲ್ ಮತ್ತು ಶಿವಂ ದುಬೆ ಜತೆಗೆ ವಿಮಾನದಲ್ಲಿ ಹೈದರಾಬಾದ್ ಗೆ ಸಾಗುತ್ತಿರುವ ಫೋಟೋ ಪ್ರಕಟಿಸಿರುವ ಕೊಹ್ಲಿ ಹೊಸ ಸರಣಿಗೆ ರೆಡಿಯಾಗಿರುವುದಾಗಿ ಹೇಳಿದ್ದಾರೆ.

ಈ ನಡುವೆ ವೆಸ್ಟ್ ಇಂಡೀಸ್ ಕೂಡಾ ಹೈದರಾಬಾದ್ ಗೆ ಬಂದು ಅಭ್ಯಾಸ ಶುರು ಮಾಡಿಕೊಂಡಿದೆ. ಮೊದಲ ಪಂದ್ಯ ಡಿಸೆಂಬರ್ 6 ರಂದು ನಡೆಯಲಿದೆ. ಆದರೆ ಮೋಡ ಕವಿದ ವಾತಾವರಣ ಪಂದ್ಯ ನಡೆಸಲು ಅಡ್ಡಿಯಾಗುವ ಆತಂಕ ತಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ವೀಟ್ ಮಾಡಿ ಅಪಹಾಸ್ಯಕ್ಕೀಡಾದ ಆರ್ ಸಿಬಿ