Select Your Language

Notifications

webdunia
webdunia
webdunia
webdunia

ಮದುವೆ ಬಳಿಕ ಮನೀಶ್ ಪಾಂಡೆಗೆ ಹನಿಮೂನ್ ಮಾಡಿಕೊಳ್ಳಲೂ ಪುರುಸೊತ್ತಿಲ್ಲ!

ಮದುವೆ ಬಳಿಕ ಮನೀಶ್ ಪಾಂಡೆಗೆ ಹನಿಮೂನ್ ಮಾಡಿಕೊಳ್ಳಲೂ ಪುರುಸೊತ್ತಿಲ್ಲ!
ಬೆಂಗಳೂರು , ಬುಧವಾರ, 4 ಡಿಸೆಂಬರ್ 2019 (09:02 IST)
ಬೆಂಗಳೂರು: ನಟಿ ಆಶ್ರಿತಾ ಶೆಟ್ಟಿ ಜತೆಗೆ ಸೋಮವಾರವರಷ್ಟೇ ವಿವಾಹ ಜೀವನಕ್ಕೆ ಕಾಲಿಟ್ಟಿರುವ ಕರ್ನಾಟಕ ಮೂಲದ ಟೀಂ ಇಂಡಿಯಾ ಕ್ರಿಕೆಟಿಗ ಮನೀಶ್ ಪಾಂಡೆಗೆ ಈಗ ಪತ್ನಿ ಜತೆ ಕಾಲ ಕಳೆಯಲೂ ಪುರುಸೊತ್ತಿಲ್ಲ!


ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಫೈನಲ್ ಪಂದ್ಯ ಮುಗಿಸಿ ನೇರವಾಗಿ ವಿವಾಹ ಮಂಟಪಕ್ಕೇ ಹೋಗಿ ಆಶ್ರಿತಾ ಜತೆ ಸಪ್ತಪದಿ ತುಳಿದಿದ್ದ ಮನೀಶ್ ಇದೀಗ ಮದುವೆ ಶಾಸ್ತ್ರ ಮುಗಿದ ತಕ್ಷಣವೇ ಟೀಂ ಇಂಡಿಯಾ ಸೇರಿಕೊಳ್ಳಬೇಕಿದೆ.

ವೆಸ್ಟ್ ಇಂಡೀಸ್ ವಿರುದ್ಧ ಡಿಸೆಂಬರ್ 6 ರಿಂದ ಟಿ20 ಸರಣಿ ಆರಂಭವಾಗಲಿದ್ದು, ಈ ಸರಣಿಯಲ್ಲಿ ಪಾಲ್ಗೊಳ್ಳಲು ಅವರು ತಂಡವನ್ನು ಕೂಡಿಕೊಳ್ಳಬೇಕಿದೆ. ಹೀಗಾಗಿ ಈ ವಾರ ಮನೀಶ್ ಜೀವನದಲ್ಲಿ ಒಂದೊಂದು ದಿನವೂ ಮಹತ್ವದ್ದು ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನೂತನ ಮದುಮಗ ಮನೀಶ್ ಪಾಂಡೆಗೆ ರೋಹಿತ್ ಶರ್ಮಾ ವಿಶ್ ಮಾಡಿದ್ದು ಹೀಗೆ!