Publish Date: Thu, 05 Dec 2019 (09:31 IST)
Updated Date: Thu, 05 Dec 2019 (09:32 IST)
ಮುಂಬೈ: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ವಿಶ್ವದ ಪ್ರಮುಖ ಬೌಲರ್ ಆಗಿರಬಹುದು. ಆದರೆ ನಾನು ಅವರನ್ನು ಲೀಲಾಜಾಲವಾಗಿ ಎದುರಿಸುತ್ತಿದ್ದೆ. ಅವರೊಬ್ಬ ಬಚ್ಚಾ ಬೌಲರ್ ಎಂದು ಪಾಕ್ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಹೇಳಿಕೊಂಡಿದ್ದಾರೆ.
‘ನಾನು ಎಷ್ಟೋ ವಿಶ್ವದರ್ಜೆಯ ಆಟಗಾರರನ್ನು ಸಮರ್ಥವಾಗಿ ಎದುರಿಸಿದ್ದೆ. ಒಂದು ವೇಳೆ ಬುಮ್ರಾ ಬೌಲಿಂಗ್ ಎದುರಿಸಬೇಕೆಂದರೆ ನನಗೆ ಯಾವುದೇ ಸಮಸ್ಯೆಯೂ ಆಗುತ್ತಿರಲಿಲ್ಲ. ಒಂದು ವೇಳೆ ನಾವಿಬ್ಬರು ಮುಖಾಮುಖಿಯಾದರೆ ಒತ್ತಡ ಬುಮ್ರಾ ಮೇಲಿರಲಿದೆ. ಗ್ಲೆನ್ ಮೆಗ್ರಾತ್, ವಾಸಿಂ ಅಕ್ರಂ, ಶೊಯೇಬ್ ಅಖ್ತರ್ ನಂತಹ ಬೌಲರ್ ಗಳನ್ನು ಎದುರಿಸದಾಗ ನಿಮಗೆ ಆತ್ಮವಿಶ್ವಾಸ ಬಂದಿರುತ್ತದೆ. ಅವರ ಎದುರು ಬುಮ್ರಾ ಬಚ್ಚಾ ಬೌಲರ್’ ಎಂದು ರಜಾಕ್ ಹಗುರವಾಗಿ ಮಾತನಾಡಿದ್ದಾರೆ.