Publish Date: Fri, 25 Oct 2019 (17:23 IST)
Updated Date: Fri, 25 Oct 2019 (17:24 IST)
ಮುಂಬೈ: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧನಾಗೆ ವಿಸ್ಟನ್ ವರ್ಷದ ಕ್ರಿಕೆಟಿಗ ಪ್ರಶಸ್ತಿ ಗೌರವ ಲಭಿಸಿದೆ.
ಇವರಿಬ್ಬರ ಹೊರತಾಗಿ ಪ್ರಶಸ್ತಿಗೆ ಭಾಜನರಾದ ಏಷ್ಯಾದ ಇತರ ಕ್ರಿಕೆಟಿಗರೆಂದರೆ ಪಾಕಿಸ್ತಾನದ ಫಖರ್ ಝಮಾನ್ ಮತ್ತು ಶ್ರೀಲಂಕಾದ ದಿಮುತ್ ಕರುಣರತ್ನೆ ಹಾಗೂ ಅಫ್ಘಾನಿಸ್ತಾನದ ರಶೀದ್ ಖಾನ್.
ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಕ್ರಿಕೆಟ್ ಪಬ್ಲಿಕೇಷನ್ ನ ಏಳನೇ ಆವೃತ್ತಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲದೆ, ಮಾಜಿ ಕ್ರಿಕೆಟಿಗರಾದ ಗುಂಡಪ್ಪ ವಿಶ್ವನಾಥ್ ಮತ್ತು ಲಾಲ ಅಮರನಾಥ್ ವಿಸ್ಡನ್ ಇಂಡಿಯಾದ ಹಾಲ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.