Select Your Language

Notifications

webdunia
webdunia
webdunia
webdunia

ಸ್ಟೀವ್ ಸ್ಮಿತ್ ರ ನಂ.1 ಸ್ಥಾನ ಕಸಿದುಕೊಂಡ ವಿರಾಟ್ ಕೊಹ್ಲಿ

ಸ್ಟೀವ್ ಸ್ಮಿತ್ ರ ನಂ.1 ಸ್ಥಾನ ಕಸಿದುಕೊಂಡ ವಿರಾಟ್ ಕೊಹ್ಲಿ
ದುಬೈ , ಗುರುವಾರ, 5 ಡಿಸೆಂಬರ್ 2019 (09:03 IST)
ದುಬೈ: ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ರನ್ನು ಹಿಂದಿಕ್ಕಿ ಮತ್ತೆ ನಂ.1 ಆಗಿದ್ದಾರೆ.


ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿರುವ ಐಸಿಸಿ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಕೊಹ್ಲಿ ಮತ್ತೆ ನಂ.1 ಆಗಿರುವುದನ್ನು ತಿಳಿಸಿದೆ. ಕಳೆದ ವಾರ ಕೆಲವೇ ಅಂಕಗಳ ಅಂತರದಿಂದ ಕೊಹ್ಲಿ ನಂ.2 ನೇ ಸ್ಥಾನದಲ್ಲಿದ್ದರು. ಈ ವಾರದ ಪಟ್ಟಿಯಲ್ಲಿ ಕೊಹ್ಲಿ ಮತ್ತೆ ನಂ.1 ಪಟ್ಟಕ್ಕೇರಿದ್ದಾರೆ. ಸದ್ಯಕ್ಕೆ ಕೊಹ್ಲಿ 928 ಅಂಕ ಪಡೆದರೆ ಸ್ಟೀವ್ ಸ್ಮಿತ್ 923 ಅಂಕ ಹೊಂದಿದ್ದಾರೆ.

ಆದರೆ ಮಯಾಂಕ್ ಅಗರ್ವಾಲ್ ಟಾಪ್ 10 ಪಟ್ಟಿಯಿಂದ ಹೊರಬಿದ್ದಿದ್ದಾರೆ. ಬೌಲರ್ ಗಳ ಯಾದಿಯಲ್ಲಿ ಮೊಹಮ್ಮದ್ ಶಮಿ ಟಾಪ್ 10ರೊಳಗೆ ಸ್ಥಾನ ಪಡೆದರೆ, ಜಸ್ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದ ಬೃಹತ್ ಕ್ರಿಕೆಟ್ ಸ್ಟೇಡಿಯಂ ಉದ್ಘಾಟನೆಗೆ ತಕ್ಕ ಪಂದ್ಯವನ್ನೇ ಆಯ್ಕೆ ಮಾಡಿಕೊಂಡಿರುವ ಬಿಸಿಸಿಐ