Publish Date: Thu, 28 Mar 2019 (09:15 IST)
Updated Date: Thu, 28 Mar 2019 (09:16 IST)
ನವದೆಹಲಿ: ರಾಯಭಾರಿಯಾಗಿದ್ದಕ್ಕೆ ತನಗೆ ಅಮ್ರಾಪಲಿ ರಿಯಲ್ ಎಸ್ಟೇಟ್ ಗ್ರೂಪ್ ನೀಡಬೇಕಿದ್ದ 40 ಕೋಟಿ ರೂ. ಬಾಕಿ ಹಣ ವಸೂಲಾತಿಗೆ ಕ್ರಿಕೆಟಿಗ ಧೋನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
2009 ರಿಂದ 2016 ರವರೆಗೆ ಧೋನಿ ಈ ಕಂಪನಿಯ ರಾಯಭಾರಿಯಾಗಿದ್ದರು. ಆದರೆ ಇದು ಗ್ರಾಹಕರಿಗೆ ವಂಚನೆ ಮಾಡಿದ ಹಿನ್ನಲೆಯಲ್ಲಿ ಜನರೇ ಧೋನಿ ವಿರುದ್ಧ ಸೋಷಿಯಲ್ ಮೀಡಿಯಾ ಅಭಿಯಾನ ನಡೆಸಿ ರಾಯಭಾರತ್ವದಿಂದ ಹಿಂದೆ ಸರಿಯುವಂತೆ ಮಾಡಿದ್ದರು.
ಅದಾದ ಬಳಿಕ ಧೋನಿ ಒಪ್ಪಂದ ಮುರಿದುಕೊಂಡಿದ್ದರು. ಆದರೆ ಆರು ವರ್ಷಗಳ ಕಾಲ ತನ್ನ ಹೆಸರನ್ನು ಬಳಸಿ ಸಂಸ್ಥೆ ಮಾರ್ಕೆಟಿಂಗ್ ಮಾಡಿದ್ದಕ್ಕೆ ತನಗೆ ನೀಡಬೇಕಿದ್ದ ಹಣ ಪಾವತಿ ಮಾಡಿಲ್ಲ ಎಂದು ಧೋನಿ ಆರೋಪವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ