Publish Date: Thu, 28 Mar 2019 (09:12 IST)
Updated Date: Thu, 28 Mar 2019 (09:14 IST)
ನವದೆಹಲಿ: ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಕೊನೆಯಲ್ಲಿ ಮತ್ತೆ ಧೋನಿ ಅಭಿಮಾನಿಗಳ ಅಭಿಮಾನದ ಪರಾಕಷ್ಟೆ ಪ್ರದರ್ಶನಗೊಂಡಿದೆ.
ಸಿಎಸ್ ಕೆ ಗೆಲುವಿನ ರನ್ ಬಾರಿಸಿ ಪೆವಿಲಿಯನ್ ಗೆ ಮರಳಬೇಕಿದ್ದ ಧೋನಿಯ ಕಾಲಿಗೆ ಬೀಳಲು ಒಂದಿಬ್ಬರು ಅಭಿಮಾನಿಗಳು ಭದ್ರತೆ ಮುರಿದು ಸೀದಾ ಮೈದಾನಕ್ಕೆ ನುಗ್ಗಿದ್ದಾರೆ. ಧೋನಿ ಎಷ್ಟೇ ಬೇಡವೆಂದರೂ ಈ ಅಭಿಮಾನಿಗಳು ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಧೋನಿ ಕಾಲಿಗೆ ಬಿದ್ದ ಪ್ರಸಂಗಗಳು ನಡೆದಿವೆ. ಇತ್ತೀಚೆಗೆ ಎರಡು ಬಾರಿ ಹೀಗೆ ತಮ್ಮನ್ನು ನೋಡಲು ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಧೋನಿ ಚೇಸ್ ಮಾಡಿಸಿ ತಮಾಷೆ ಮಾಡಿದ ಘಟನೆಯೂ ನಡೆದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ