Publish Date: Thu, 09 Jan 2020 (10:10 IST)
Updated Date: Thu, 09 Jan 2020 (10:12 IST)
ಮುಂಬೈ: ಟೀಂ ಇಂಡಿಯಾದಿಂದ ಸುದೀರ್ಘ ಬ್ರೇಕ್ ತೆಗೆದುಕೊಂಡಿರುವ ಹಿರಿಯ ವಿಕೆಟ್ ಕೀಪರ್ ಧೋನಿ ಈಗ ತಮ್ಮ ಕುಟುಂಬದ ಜತೆ ಮಸ್ತ್ ಮಜಾ ಮಾಡುತ್ತಿದ್ದಾರೆ.
ಮುಸ್ಸೋರಿಯಲ್ಲಿ ಪತ್ನಿ ಸಾಕ್ಷಿ ಸಿಂಗ್, ಪುತ್ರಿ ಜೀವಾ ಜತೆ ಮಂಜಿನ ಜತೆ ಆಡುವ ಫನ್ನಿ ಕ್ಷಣಗಳನ್ನು ಧೋನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಕುಟುಂಬ ಸಮೇತರಾಗಿ ಮುಸ್ಸೋರಿಗೆ ತೆರಳಿರುವ ಧೋನಿ ಸುರಿಯುವ ಹಿಮಪಾತದಲ್ಲಿ ಪತ್ನಿ, ಮಗಳೊಂದಿಗೆ ತುಂಟಾಟವಾಡುವ ವಿಡಿಯೋ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಇಲ್ಲಿನ ಬೀದಿಗಳಲ್ಲಿ ನಡೆದಾಡಿ ತಮ್ಮ ಖಾಸಗಿ ಸಮಯವನ್ನು ಎಂಜಾಯ್ ಮಾಡಿದ್ದಾರೆ.