Publish Date: Mon, 06 Jan 2020 (10:51 IST)
Updated Date: Mon, 06 Jan 2020 (10:53 IST)
ರಾಂಚಿ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ಪುತ್ರಿ ಜೀವಾ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಲೇ ಇರುತ್ತದೆ.
ಇದೀಗ ಧೋನಿ ತಮ್ಮ ಪುತ್ರಿ ಗಿಟಾರ್ ನುಡಿಸುತ್ತಾ ಮುದ್ದಾಗಿ ಹಾಡುವ ವಿಡಿಯೋ ಒಂದನ್ನು ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಭಾರೀ ವೈರಲ್ ಆಗಿದೆ. ಮಂಜು ಸುರಿಯುವ ಹಿನ್ನಲೆಯಲ್ಲಿ ಧೋನಿ ಪುತ್ರಿ ಮುದ್ದಾಗಿ ಹಾಡುವ ವಿಡಿಯೋ ನೋಡಿ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಲೈಕ್ಸ್, ಕಾಮೆಂಟ್ ಕೊಟ್ಟಿದ್ದಾರೆ.