Publish Date: Fri, 03 Jan 2020 (09:30 IST)
Updated Date: Fri, 03 Jan 2020 (09:32 IST)
ಮುಂಬೈ: ಚೆಂದುಳ್ಳಿ ಚೆಲುವೆ ನತಾಶಾ ಜತೆ ಎಂಗೇಜ್ ಮೆಂಟ್ ಮಾಡಿಕೊಂಡ ಚಿತ್ರವನ್ನು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಕ್ಕೆ ಕಿಡಿಗೇಡಿಗಳು ಜನಾಂಗೀಯ ನಿಂದನೆ ಮಾಡಿದ್ದಾರೆ.
ನತಾಶಾ ಬೆಳ್ಳಗಿದ್ದರೆ, ಪಾಂಡ್ಯ ಮೈ ಬಣ್ಣ ಕಪ್ಪು. ಹೀಗಾಗಿ ಇದನ್ನೇ ಮುಂದಿಟ್ಟುಕೊಂಡು ಕಿಡಿಗೇಡಿಗಳು ಜನಾಂಗೀಯ ನಿಂದನೆ ಮಾಡಿ ಕಾಮೆಂಟ್ ಮಾಡಿದ್ದಾರೆ.
ಕೆಲವರು ಹಾರ್ದಿಕ್ ಮೈ ಬಣ್ಣವನ್ನು ಮುಂದಿಟ್ಟುಕೊಂಡು ಜನಾಂಗೀಯವಾಗಿ ನಿಂದನೆ ಮಾಡಿದ್ದಕ್ಕೆ ಅವರ ಅಭಿಮಾನಿಗಳೇ ತಿರುಗೇಟು ನೀಡಿ ಸುಮ್ಮನಾಗಿಸಿದ್ದಾರೆ.