Select Your Language

Notifications

webdunia
webdunia
webdunia
webdunia

ಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ
ಮುಂಬೈ: ಹೊಸ ವರ್ಷಾಚರಣೆಯನ್ನು ಎಲ್ಲರೂ ತಮ್ಮದೇ ರೀತಿಯಲ್ಲಿ ಆಚರಿಸುತ್ತಿದ್ದರೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಬಹುದಿನಗಳ ಪ್ರೀತಿಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.


ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಲವು ದಿನಗಳಿಂದ ಸರ್ಬಿಯಾ ಮೂಲದ ಮಾಡೆಲ್ ನತಾಶಾ ಜತೆಗೆ ಡೇಟಿಂಗ್ ನಲ್ಲಿದ್ದರು. ಇದೀಗ ಹೊಸ ವರ್ಷದ ದಿನ ತಮ್ಮ ರಿಲೇಷನ್ ಶಿಪ್ ನ್ನು ಹಾರ್ದಿಕ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಹಾರ್ದಿಕ್ ಪ್ರಿಯತಮೆ ನತಾಶಾ ಜತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಕೊನೆಗೂ ತಮ್ಮಿಬ್ಬರ ನಡುವಿನ ಪ್ರೇಮ ಪ್ರಕರಣವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಹಾರ್ದಿಕ್ ರ ಈ ಪೋಸ್ಟ್ ಗೆ ಯಜುವೇಂದ್ರ ಚಾಹಲ್ ಸೇರಿದಂತೆ ಕ್ರಿಕೆಟ್ ಗೆಳೆಯರೂ ಕಾಮೆಂಟ್ ಮಾಡಿದ್ದಾರೆ. ಸದ್ಯಕ್ಕೆ ಪಾಂಡ್ಯ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಪಾರ್ಟಿ ಮೋಜು