ನವದೆಹಲಿ: ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ದೆಹಲಿ ಕ್ರಿಕೆಟ್ ಸಂಸ್ಥೆ ಅಧ‍್ಯಕ್ಷ ಸ್ಥಾನಕ್ಕೇರುವ ಸಂಭವ ದಟ್ಟವಾಗಿದೆ. ಈ ಮೊದಲು ಗಂಭೀರ್ ದೆಹಲಿ ಕ್ರಿಕೆಟ್ ಸಂಸ್ಥೆ ನಿರ್ದೇಶಕ ಸ್ಥಾನದಲ್ಲಿದ್ದು, ರಾಜೀನಾಮೆ ನೀಡಿದ್ದರು.
ಇದೀಗ ಮತ್ತೆ ಗಂಭೀರ್ ಗೆ ದೆಹಲಿ ಸಂಸ್ಥೆಯ ಅಧ್ಯಕ್ಷರಾಗುವ ಅವಕಾಶ ಲಭಿಸಿದೆ. ದೆಹಲಿ ಕ್ರಿಕೆಟ್ ಸಂಸ್ಥೆ ಮೂಲಗಳ ಪ್ರಕಾರ ಗಂಭೀರ್ ರನ್ನು ಈ ಹುದ್ದೆಗೆ ನೇಮಕ ಮಾಡಲು ಮಾತುಕತೆ ನಡೆದಿದೆ ಎನ್ನಲಾಗಿದೆ.
ಮಾಜಿ ನಾಯಕ ಗಂಗೂಲಿ ಬಿಸಿಸಿಐ ಅಧ‍್ಯಕ್ಷರಾಗಿ ಭಾರತೀಯ ಕ್ರಿಕೆಟ್ ನಲ್ಲಿ ಬದಲಾವಣೆ ತರಲು ಹೊರಟಿದ್ದಾರೆ. ಅದೇ ರೀತಿ ಹಳಿ ತಪ್ಪಿರುವ ದೆಹಲಿ ಕ್ರಿಕೆಟ್ ಸಂಸ್ಥೆಯನ್ನು ಸರಿಪಡಿಸಲು ಗಂಭೀರ್ ರಂತಹ ವ್ಯಕ್ತಿಗಳಿಂದಲೇ ಸಾಧ‍್ಯ ಎನ್ನುವುದು ಕೆಲವರ ಅಭಿಪ್ರಾಯ.