ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಹಿಂದೂ ಧರ್ಮೀಯ ಎನ್ನುವ ಕಾರಣಕ್ಕೆ ದನೇಶ್ ಕನೇರಿಯಾರನ್ನು ಮೂಲೆಗುಂಪು ಮಾಡಲಾಗಿತ್ತು ಎಂದು ಮಾಜಿ ವೇಗಿ ಶೊಯೇಬ್ ಅಖ್ತರ್ ಹೇಳಿಕೆ ನೀಡಿದ್ದರು.
ಶೊಯೇಬ್ ಹೇಳಿಕೆ ಬೆನ್ನಲ್ಲೇ ದನೇಶ್ ಕೂಡಾ ನನ್ನನ್ನು ಕೀಳಾಗಿ ಕಾಣುತ್ತಿದ್ದ ಕ್ರಿಕೆಟಿಗರ ಹೆಸರು ಬಹಿರಂಗಪಡಿಸುತ್ತೇನೆ ಎನ್ನುವ ಮೂಲಕ ಮಾಜಿ ವೇಗಿಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಇನ್ನೇನು ದನೇಶ್ ಪಾಕ್ ಕ್ರಿಕೆಟಿಗರು ಮುಸ್ಲಿಮೇತರ ಕ್ರಿಕೆಟಿಗನನ್ನು ನಡೆಸಿಕೊಂಡ ರೀತಿಯನ್ನು ಬಹಿರಂಗಪಡಿಸುತ್ತಾರೆ ಎನ್ನುವಷ್ಟರಲ್ಲಿ ಉಲ್ಟಾ ಹೊಡೆದಿದ್ದಾರೆ.
‘ನಾನು ಹಿಂದು ಎಂಬ ಕಾರಣಕ್ಕೆ ಕೆಲವರು ನನ್ನನ್ನು ಕೀಳಾಗಿ ಕಂಡಿದ್ದು ನಿಜ. ಆದರೆ ಅದನ್ನೆಲ್ಲಾ ನಾನು ತಲೆಗೆ ಹಾಕಿಕೊಂಡಿಲ್ಲ. ಈ ಮೂಲಕ ಪಾಕ್ ಕ್ರಿಕೆಟ್ ನ್ನು ಅವಮಾನಿಸಲಾರೆ. ನಾನು ಹೆಮ್ಮೆಯ ಹಿಂದೂ ಮತ್ತು ಪಾಕಿಸ್ತಾನಿ’ ಎಂದು ದನೇಶ್ ವಿವಾದದಿಂದ ಜಾರಿಕೊಂಡಿದ್ದಾರೆ.