Select Your Language

Notifications

webdunia
webdunia
webdunia
webdunia

ಪೌರತ್ವ ಖಾಯಿದೆ ವಿವಾದದ ಬೆನ್ನಲ್ಲೇ ಪಾಕ್ ವೇಗಿ ಶೊಯೇಬ್ ಅಖ್ತರ್ ನೀಡಿದ ಅಚ್ಚರಿಯ ಹೇಳಿಕೆ

ಪೌರತ್ವ ಖಾಯಿದೆ ವಿವಾದದ ಬೆನ್ನಲ್ಲೇ ಪಾಕ್ ವೇಗಿ ಶೊಯೇಬ್ ಅಖ್ತರ್ ನೀಡಿದ ಅಚ್ಚರಿಯ ಹೇಳಿಕೆ
ಇಸ್ಲಾಮಾಬಾದ್ , ಶುಕ್ರವಾರ, 27 ಡಿಸೆಂಬರ್ 2019 (09:06 IST)
ಇಸ್ಲಾಮಾಬಾದ್: ಭಾರತದಲ್ಲಿ ಪಾಕಿಸ್ತಾನ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಬರುವ ಹಿಂದೂ,  ಕ್ರೈಸ್ತ, ಜೈನ ಮತ್ತು ಬೌದ್ಧ ಧರ್ಮೀಯರಿಗೆ ಪೌರತ್ವ ಒದಗಿಸುವ ಪೌರತ್ವ ಖಾಯಿದೆ ಬಗ್ಗೆ ಪರ-ವಿರೋಧ ಪ್ರತಿಭಟನೆಯಾಗುತ್ತಿದ್ದರೆ ಪಾಕ್ ವೇಗಿ ಶೊಯೇಬ್ ಅಖ್ತರ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

 
ಪೌರತ್ವ ಖಾಯಿದೆ ಬಗ್ಗೆ ಶೊಯೇಬ್ ನೇರವಾಗಿ ಹೇಳದೇ ಇದ್ದರೂ, ಪಾಕ್ ತಂಡದಲ್ಲಿ ಹಿಂದೂ ಆಟಗಾರರನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಬೆಳಕು ಚೆಲ್ಲಿದ್ದಾರೆ. ತಮ್ಮ ಜತೆಗಿದ್ದ ದನೇಶ್ ಕನೇರಿಯಾ ಹಿಂದೂ ಎನ್ನುವ ಕಾರಣಕ್ಕೆ ಪಾಕ್ ತಂಡದಲ್ಲಿ ಅವಗಣಿಸಲಾಗುತ್ತಿತ್ತು ಎಂದು ಶೊಯೇಬ್ ಹೇಳಿದ್ದಾರೆ.

‘ದನೇಶ್ ಉತ್ತಮ ಆಟಗಾರನಾಗಿದ್ದರೂ ಹಿಂದೂ ಎನ್ನುವ ಕಾರಣಕ್ಕೆ ಅವಗಣನೆಗೆ ಗುರಿಯಾಗುತ್ತಿದ್ದರು. ಹಿಂದೂ ಆಗಿದ್ದುಕೊಂಡು ಈತ ಇಲ್ಲಿ ಯಾಕೆ ಉಣ್ಣುತ್ತಿದ್ದಾನೆ’ ಎಂದು ಕನೇರಿಯಾರನ್ನು ಅವಮಾನಿಸಲಾಗುತ್ತಿತ್ತು ಎಂದು ಶೊಯೇಬ್ ಹೇಳಿರುವುದು ಸಿಎಎ ಪ್ರತಿಭಟನೆ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಗೆ ಅವಮಾನ ಮಾಡಲು ಹೋಗಿ ಮಂಗಳಾರತಿ ಮಾಡಿಸಿಕೊಂಡ ಸಾನಿಯಾ ಪತಿ ಶೊಯೇಬ್ ಮಲಿಕ್