Publish Date: Tue, 24 Dec 2019 (09:59 IST)
Updated Date: Tue, 24 Dec 2019 (10:01 IST)
ಮಂಗಳೂರು: ಪೌರತ್ವ ಖಾಯಿದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಿದ ದೃಶ್ಯಾವಳಿಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿರಲಿಲ್ಲ. ಹಾಗಿದ್ದರೂ ಗೋಲಿಬಾರ್ ನಡೆಸಲಾಗಿದೆ ಎಂದು ಕೆಲವು ನಾಯಕರ ಹೇಳಿಕೆ ಹಿನ್ನಲೆಯಲ್ಲಿ ಪೊಲೀಸರು ವಿಡಿಯೋ ಬಿಡುಗಡೆ ಮಾಡಿ ಸಾಕ್ಷ್ಯ ನೀಡಿದ್ದಾರೆ.
ಇನ್ನು, ಪೊಲೀಸ್ ವರಿಷ್ಠಾಧಿಕಾರಿ ಪಿಎಸ್ ಹರ್ಷ ಗಲಭೆ ಬಗ್ಗೆ ವಿಡಿಯೋಗಳಿದ್ದರೆ ನಮಗೆ ಕಳಹುಸಿ ಎಂದು ಸಾರ್ವಜನಿಕರಿಗೆ ಟ್ವಿಟರ್ ಪೇಜ್ ಮೂಲಕ ಮನವಿ ಮಾಡಿದ್ದು, ತಮ್ಮ ಈಮೇಲ್ ಐಡಿ ಹಾಗೂ ದೂರವಾಣಿ ಸಂಖ್ಯೆಗಳನ್ನು ಒದಗಿಸಿದ್ದಾರೆ.