Publish Date: Fri, 27 Dec 2019 (08:54 IST)
Updated Date: Fri, 27 Dec 2019 (08:55 IST)
ಇಸ್ಲಾಮಾಬಾದ್: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಧೋನಿಗೆ ಅವಮಾನ ಮಾಡಲು ಹೋಗಿ ಟ್ವಿಟರ್ ನಲ್ಲಿ ಇನ್ನಿಲ್ಲದಂತೆ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
ಕ್ರಿಸ್ ಮಸ್ ಹಬ್ಬಕ್ಕೆ ಶುಭ ಕೋರುವ ನೆಪದಲ್ಲಿ ಬೇಕೆಂದೇ ಶೊಯೇಬ್ ಭಾರತೀಯ ಕ್ರಿಕೆಟ್ ದಿಗ್ಗಜ ಧೋನಿಗೆ ಅವಮಾನ ಮಾಡಿದ್ದರು. ತಾವು ಬ್ಯಾಟಿಂಗ್ ನಲ್ಲಿ ವಿಜೃಂಬಿಸುವಾಗ ವಿಕೆಟ್ ಕೀಪರ್ ಧೋನಿ ತಲೆ ತಗ್ಗಿಸಿ ನಿಂತಿರುವ ಫೋಟೋ ಹಾಕಿ ಕ್ರಿಸ್ ಮಸ್ ಹಬ್ಬಕ್ಕೆ ಶುಭಾಷಯ. ಹ್ಯಾಪೀ ಡಿಸೆಂಬರ್ 25 ಎಂದು ಟ್ವೀಟ್ ಮಾಡಿದ್ದರು.
ಆದರೆ ಈ ಸಂದರ್ಭದಲ್ಲಿ ಅನಗತ್ಯವಾಗಿ ಧೋನಿಗೆ ಅವಮಾನ ಮಾಡಲು ಯತ್ನಿಸಿದ ಪಾಕ್ ಕ್ರಿಕೆಟಿಗನಿಗೆ ಭಾರತೀಯ ಅಭಿಮಾನಿಗಳು ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಶೊಯೇಬ್ ಮಲಿಕ್ ರನ್ ಗಳಿಸುವಾಗ ಧೋನಿ ಕಾಲಿಗೆ ಬಿದ್ದಂತಹ ಫೋಟೋವೊಂದನ್ನು ಪ್ರಕಟಿಸಿ ಶೊಯೇಬ್ ಸೊಕ್ಕು ಇಳಿಸಿದ್ದಾರೆ ಭಾರತೀಯ ಅಭಿಮಾನಿಗಳು.