Publish Date: Thu, 26 Dec 2019 (08:51 IST)
Updated Date: Thu, 26 Dec 2019 (08:53 IST)
ಮುಂಬೈ: ಬೆಂಗಳೂರಿನ ಎನ್ ಸಿಎಯಲ್ಲಿ ಗಾಯಾಳು ಕ್ರೀಡಾಳಗಳ ಪುನಶ್ಚೇತನ ಕಾರ್ಯದ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ಇಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಎನ್ ಸಿಎ ಅಧ್ಯಕ್ಷ ರಾಹುಲ್ ದ್ರಾವಿಡ್ ನಡುವೆ ಮಹತ್ವದ ಸಭೆ ನಡೆಯಲಿದೆ.
ವೇಗಿ ಜಸ್ಪ್ರೀತ್ ಬುಮ್ರಾಗೆ ಎನ್ ಸಿಎ ಫಿಟ್ನೆಸ್ ಸರ್ಟಿಫಿಕೇಟ್ ನೀಡದ ವಿವಾದ ಮತ್ತು ಭುವನೇಶ್ವರ್ ಕುಮಾರ್ ಗಾಯದ ಕುರಿತು ಸರಿಯಾಗಿ ಪರೀಕ್ಷೆ ಮಾಡದ ವಿಚಾರದಲ್ಲಿ ಎನ್ ಸಿಎ ಸುತ್ತ ವಿವಾದ ಸುತ್ತಿಕೊಂಡಿದೆ.
ಈ ಬಗ್ಗೆ ಸದ್ಯದಲ್ಲೇ ದ್ರಾವಿಡ್ ಜತೆ ಮಾತುಕತೆ ನಡೆಸುವುದಾಗಿ ಗಂಗೂಲಿ ಹೇಳಿದ್ದರು. ಅದರಂತೆ ಇಂದು ಮುಂಬೈನ ಬಿಸಿಸಿಐ ಕಚೇರಿಗೆ ದ್ರಾವಿಡ್ ಗೆ ಆಹ್ವಾನ ನೀಡಿರುವ ಗಂಗೂಲಿ ಸಭೆ ನಡೆಸಲಿದ್ದಾರೆ.