Publish Date: Thu, 26 Dec 2019 (09:01 IST)
Updated Date: Thu, 26 Dec 2019 (09:02 IST)
ದುಬೈ: ವಿಶ್ವ ಕ್ರಿಕೆಟ್ ನಲ್ಲಿ ಎಷ್ಟೋ ಜನ ಅತ್ಯುತ್ತಮ ನಾಯಕರು ಬಂದು ಹೋಗಿದ್ದಾರೆ. ಈ ಪೈಕಿ ನಿಮ್ಮ ಫೇವರಿಟ್ ನಾಯಕರು ಯಾರು ಎಂಬ ಐಸಿಸಿ ಪ್ರಶ್ನೆಗೆ ಅಭಿಮಾನಿಗಳ ಉತ್ತರವೇನು ಗೊತ್ತಾ?
ಐಸಿಸಿ ಕೇಳಿದ ಪ್ರಶ್ನೆಗೆ ಅಭಿಮಾನಿಗಳೆಲ್ಲಾ ಒಕ್ಕೊರಲಿನಿಂದ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಹೆಸರು ಸೂಚಿಸಿದ್ದಾರೆ. ಭಾರತಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ನಾಯಕ ಧೋನಿಯನ್ನು ಎಂದಿಗೂ ಜನ ಮರೆಯಲ್ಲ.
ಎಷ್ಟೋ ಕ್ರಿಕೆಟಿಗರಿಗೆ ಮಾದರಿಯಾಗಿರುವ ಧೋನಿ, ನಾಯಕನಾಗಿ ಮೈದಾನದಲ್ಲಿ ಹೇಗಿರಬೇಕು, ಒತ್ತಡದ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎಂದು ತಮ್ಮ ನಡುವಳಿಕೆಯಿಂದಲೇ ಇತರರಿಗೆ ಮಾದರಿಯಾಗಿದ್ದಾರೆ. ಹೀಗಾಗಿ ಅಭಿಮಾನಿಗಳು ಧೋನಿ ಹೆಸರಿಗೆ ಬಹುಮತ ಕೊಟ್ಟಿದ್ದಾರೆ.