ಮುಂಬೈ: ಐದು ದಿನಗಳ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಕತ್ತರಿ ಪ್ರಯೋಗ ಮಾಡಿದೆ. ಇನ್ನು ಮುಂದೆ ಟೆಸ್ಟ್ ಪಂದ್ಯವನ್ನು ನಾಲ್ಕು ದಿನಕ್ಕೆ ಇಳಿಕೆ ಮಾಡಲು ನಿರ್ಧರಿಸಿದೆ.
ಈ ಮೂಲಕ ಉಳಿಕೆ ಮಾಡಿದ ದಿನಗಳಲ್ಲಿ ಟಿ20 ಪಂದ್ಯಗಳು ಮತ್ತು ಇತರ ಜಾಗತಿಕ ಕೂಟಗಳಿಗೆ ಸಮಯಾವಕಾಶ ಮಾಡಲು ಐಸಿಸಿ ತೀರ್ಮಾನಿಸಿದೆ. ಈ ಮೂಲಕ ಟೆಸ್ಟ್ ಪಂದ್ಯದ ರೋಚಕತೆ ಹೆಚ್ಚಿಸಲೂ ಸಹಾಯವಾಗಲಿದೆ ಎಂಬುದು ಐಸಿಸಿ ಲೆಕ್ಕಾಚಾರ.
ಆದರೆ ಇದು ತಕ್ಷಣವೇ ಜಾರಿಯಾಗಲ್ಲ. 2023 ರಿಂದ 2031 ರವರೆಗಿನ ಟೆಸ್ಟ್ ವೇಳಾಪಟ್ಟಿಯನ್ನು ಐಸಿಸಿ ಪರಿಷ್ಕರಿಸಿದೆ. ಹೀಗಾಗಿ ಆ ವರ್ಷದಲ್ಲಿ ಈ ನಿಯಮ ಜಾರಿಗೆ ಬರುವ ಸಾಧ‍್ಯತೆಯಿದೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಪ್ರಶ್ನಿಸಿದಾಗ ಈ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದಿದ್ದಾರೆ. ಭಾರತ ಕೂಡಾ ಹೆಚ್ಚು ಟಿ20 ಕ್ರಿಕೆಟ್ ಕೂಟಗಳನ್ನು ಆಯೋಜಿಸಲು ಈ ಹಿಂದೆಯೇ ಆಗ್ರಹಿಸಿತ್ತು. ಹೀಗಾಗಿ ಐಸಿಸಿಯ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗುವ ಸಾಧ‍್ಯತೆಯಿಲ್ಲ.