Publish Date: Thu, 07 Mar 2019 (09:47 IST)
Updated Date: Thu, 07 Mar 2019 (09:48 IST)
ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಧೋನಿ ತವರು ರಾಂಚಿಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮೊದಲು ರಾಂಚಿ ಕ್ರೀಡಾಂಗಣದ ಪೆವಿಲಿಯನ್ ಒಂದಕ್ಕೆ ಧೋನಿ ಹೆಸರು ಇಡಲಾಗಿದ್ದು, ಅದರ ಉದ್ಘಾಟನೆ ಮಾಡಲು ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ತೀರ್ಮಾನಿಸಿತ್ತು.
ಹೇಗೂ ಧೋನಿ ಸಮೇತ ಟೀಂ ಇಂಡಿಯಾ ಕ್ರಿಕೆಟಿಗರು ಇಲ್ಲೇ ಇದ್ದಾರೆ. ಇದೇ ತಕ್ಕ ಸಮಯವೆಂದು ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಧೋನಿ ಬಳಿ ಬಂದು ತಮ್ಮ ಹೆಸರಿನ ಪೆವಿಲಿಯನ್ ಉದ್ಘಾಟಿಸಲು ಮನವಿ ಮಾಡಿದ್ದರು. ಆದರೆ ಧೋನಿ ಇದಕ್ಕೆ ನಿರಾಕರಿಸಿದ್ದಾರೆ.
‘ನಾನು ಇದನ್ನು ಉದ್ಘಾಟಿಸುವುದರಿಂದ ನನ್ನದೇ ತವರಿನಲ್ಲಿ ನಾನು ಅನ್ಯನಂತೆ ಭಾಸವಾಗುತ್ತದೆ’ ಎಂದು ಕಾರಣ ನೀಡಿದ್ದಾರಂತೆ. ಇದೀಗ ಧೋನಿ ಮನವಿಯನ್ನು ಒಪ್ಪಿಕೊಂಡಿರುವ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಬೇರೆಯವರ ಕೈಯಲ್ಲಿ ಉದ್ಘಾಟಿಸಲು ತೀರ್ಮಾನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.