Select Your Language

Notifications

webdunia
webdunia
webdunia
webdunia

ಹೊಸ ದಾಖಲೆ ನಿರ್ಮಿಸಿದ ಧೋನಿ

ಹೊಸ ದಾಖಲೆ ನಿರ್ಮಿಸಿದ ಧೋನಿ
ಪುಣೆ , ಗುರುವಾರ, 26 ಅಕ್ಟೋಬರ್ 2017 (10:07 IST)
ಪುಣೆ: ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಜಯಭೇರಿ ಭಾರಿಸುವುದರ ಜತೆಗೆ ವಿಕೆಟ್ ಕೀಪರ್ ಧೋನಿ ಹೊಸದೊಂದು ದಾಖಲೆಯನ್ನೂ ನಿರ್ಮಿಸಿದರು.

 
ಈ ಪಂದ್ಯದ ಮೂಲಕ ಧೋನಿ 200 ಕ್ಯಾಚ್ ಪಡೆದ ವಿಶ್ವದ ಮೂರನೇ ಮತ್ತು ಭಾರತದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು. ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಮಾರ್ಟಿನ್ ಗುಪ್ಟಿನ್ ಹೊಡೆದ ಬಾಲ್ ನ್ನು ಕ್ಯಾಚ್ ಪಡೆದ ಧೋನಿ ಈ ದಾಖಲೆ ನಿರ್ಮಿಸಿದರು.

ಶ್ರೀಲಂಕಾದ ಕುಮಾರ ಸಂಗಕ್ಕಾರ, ಇಂಗ್ಲೆಂಡ್ ನ ಅಲೆಕ್ ಸ್ಟುವರ್ಟ್ ಧೋನಿಗಿಂತ ಮೊದಲು ಈ ಸಾಧನೆ ಮಾಡಿದ್ದರು. ಅತೀ ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆಯನ್ನೂ ಧೋನಿ ಇತ್ತೀಚೆಗಷ್ಟೇ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಮದುವೆ ಸುದ್ದಿ ಎಲ್ಲಾ ಸುಳ್ಳು!