Publish Date: Thu, 26 Oct 2017 (08:49 IST)
Updated Date: Thu, 26 Oct 2017 (08:51 IST)
ಮುಂಬೈ: ಶ್ರೀಲಂಕಾ ವಿರುದ್ಧದ ಎಲ್ಲಾ ಟೆಸ್ಟ್ ಸರಣಿಗೂ ವಿರಾಟ್ ಕೊಹ್ಲಿ ಲಭ್ಯರಿರುತ್ತಾರೆ. ಅವರು ಡಿಸೆಂಬರ್ ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ ಎಂಬ ಸುದ್ದಿಗಳೆಲ್ಲಾ ಸುಳ್ಳು ಎಂದು ಆಯ್ಕ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಇದರೊಂದಿಗೆ ಕೊಹ್ಲಿ ಡಿಸೆಂಬರ್ ನಲ್ಲಿ ಅನುಷ್ಕಾ ಶರ್ಮಾ ಜತೆ ಮದುವೆಯಾಗಲಿದ್ದಾರೆ ಎಂಬ ಊಹಾಪೋಹಗಳಿಗೂ ತೆರೆ ಬಿದ್ದಿದೆ. ಲಂಕಾ ಸರಣಿಯ ನಂತರ ಕೊಹ್ಲಿ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ.
‘ಕೊಹ್ಲಿ ಎಲ್ಲಾ ಮೂರು ಟೆಸ್ಟ್ ಪಂದ್ಯಗಳಿಗೆ ಲಭ್ಯರಿರುತ್ತಾರೆ. ಅದರ ಬಳಿಕವೇ ಅವರಿಗೆ ವಿಶ್ರಾಂತಿ ನೀಡುವ ಬಗ್ಗೆ ಯೋಚನೆ ಮಾಡುತ್ತೇವೆ. ರೊಟೇಷನ್ ಪದ್ಧತಿ ನಾಯಕನಿಗೂ ಅನ್ವಯಿಸುತ್ತದೆ. ಅವರಿಗೂ ವಿಶ್ರಾಂತಿ ಅಗತ್ಯವಿದೆ’ ಎಂದು ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ನವಂಬರ್ 16 ರಿಂದ ಡಿಸೆಂಬರ್ 24 ರವರೆಗೆ ಲಂಕಾ ಸರಣಿ ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ