Publish Date: Tue, 30 Jun 2020 (11:19 IST)
Updated Date: Tue, 30 Jun 2020 (11:21 IST)
ಮುಂಬೈ: ಭಾರತದಲ್ಲಿ ಚೀನಾ ಮೂಲದ ಟಿಕ್ ಟಾಕ್ ಬ್ಯಾನ್ ಮಾಡಿದ್ದಕ್ಕೆ ಟ್ರೋಲ್ ಆಗಿರುವುದು ಮಾತ್ರ ಆಸ್ಟ್ರೇಲಿಯಾ ಮೂಲದ ಹೈದರಾಬಾದ್ ಸನ್ ರೈಸರ್ಸ್ ಐಪಿಎಲ್ ತಂಡದ ಕ್ರಿಕೆಟಿಗ ಡೇವಿಡ್ ವಾರ್ನರ್.
ಇದಕ್ಕೆ ಕಾರಣ ಇತ್ತೀಚೆಗೆ ವಾರ್ನರ್ ಟಿಕ್ ಟಾಕ್ ನಲ್ಲಿ ಹಲವು ತೆಲುಗು ಸೂಪರ್ ಹಿಟ್ ಸಿನಿಮಾಗಳ ಹಾಡಿಗೆ ಸ್ಟೆಪ್ ಹಾಕಿದ್ದು ವೈರಲ್ ಆಗಿತ್ತು. ಆದರೆ ಈಗ ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆಗಿರುವುದರಿಂದ ಇನ್ನು ಮುಂದೆ ವಾರ್ನರ್ ಗೆ ಇಂತಹ ವಿಡಿಯೋ ಮಾಡಲಾಗಲ್ಲ ಎಂದು ಕ್ರಿಕೆಟಿಗರು, ಟ್ವಿಟರಿಗರು ಅವರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.
ಅದರಲ್ಲೂ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರಜನೀಕಾಂತ್ ಅವರ ‘ಬಾಶಾ’ ಸಿನಿಮಾದ ಡೈಲಾಗ್ ಒಂದನ್ನು ಉಲ್ಲೇಖಿಸಿ ವಾರ್ನರ್ ಈಗ ಏನು ಮಾಡ್ತೀಯಾ ಎಂದು ತಮಾಷೆ ಮಾಢಿದ್ದಾರೆ. ಇನ್ನು ಟ್ವಿಟರಿಗರಂತೂ ಟಿಕ್ ಟಾಕ್ ಬ್ಯಾನ್ ಮಾಡಿದ್ದಕ್ಕೆ ಬೇಸರದಲ್ಲಿ ವಾರ್ನರ್ ಭಾರತಕ್ಕೆ ಬರದೇ ಇರಬಹುದು ಎಂದು ಕಾಲೆಳೆದಿದ್ದಾರೆ.