Select Your Language

Notifications

webdunia
webdunia
webdunia
webdunia

ಫಿಕ್ಸಿಂಗ್ ಆರೋಪ: ಟೀಂ ಇಂಡಿಯಾ ಗೆದ್ದ 2011 ರ ವಿಶ್ವಕಪ್ ಫೈನಲ್ ತನಿಖೆಗೆ ಆದೇಶ

ಫಿಕ್ಸಿಂಗ್ ಆರೋಪ: ಟೀಂ ಇಂಡಿಯಾ ಗೆದ್ದ 2011 ರ ವಿಶ್ವಕಪ್ ಫೈನಲ್ ತನಿಖೆಗೆ ಆದೇಶ
ಕೊಲೊಂಬೋ , ಮಂಗಳವಾರ, 30 ಜೂನ್ 2020 (10:12 IST)
ಕೊಲೊಂಬೋ: 2011 ರಲ್ಲಿ ಭಾರತ ಗೆದ್ದಿದ್ದ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು ಎಂಬ ಶ್ರೀಲಂಕಾದ ಮಾಜಿ ಸಚಿವರ ಆರೋಪದ ಹಿನ್ನಲೆಯಲ್ಲಿ ಆ ಪಂದ್ಯವನ್ನು ತನಿಖೆಗೊಳಪಡಿಸಲು ಲಂಕಾ ಮುಂದಾಗಿದೆ.

 

ಫೈನಲ್ ಪಂದ್ಯ ಫಿಕ್ಸಿಂಗ್ ನಲ್ಲಿ ಲಂಕಾ ತಂಡದ ಕೆಲವು ಆಟಗಾರರು ಭಾಗಿಯಾಗಿದ್ದರು ಎಂದು ಲಂಕಾದ ಅಂದಿನ ಕ್ರೀಡಾ ಸಚಿವರಾಗಿದ್ದ ಅಲುತಗಮಗೆ ಆರೋಪಿಸಿದ್ದರು.

ಇದರ ಬೆನ್ನಲ್ಲೇ ಇದೀಗ ಪ್ರಕರಣವನ್ನು ಪೊಲೀಸರ ಸ್ವತಂತ್ರ ತನಿಖಾ ದಳಕ್ಕೆ ವಹಿಸಿದ್ದು, ಕ್ರಿಮಿನಲ್ ವಿಚಾರಣೆ ನಡೆಯಲಿದೆ ಎಂದು ಕ್ರೀಡಾ ಸಚಿವಾಲಯ ಹೇಳಿಕೆ ನೀಡಿದೆ. ಭಾರತ ಮತ್ತು ಲಂಕಾ ತಂಡ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್, ಗಂಗೂಲಿ 2007 ರ ಟಿ20 ವಿಶ್ವಕಪ್ ಆಡದೇ ಇರಲು ರಾಹುಲ್ ದ್ರಾವಿಡ್ ಕಾರಣವಂತೆ!