ಕೊಲಂಬೋ: 2011 ರಲ್ಲಿ ಮುಂಬೈನಲ್ಲಿ ನಡೆದಿದದ್ದ ಭಾರತ-ಶ್ರೀಲಂಕಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿತ್ತು ಎಂದು ಆರೋಪಿಸಿದ್ದ ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹೀಂದಾನಂದ ಅತುಲಗಮಗೆ ಈಗ ಉಲ್ಟಾ ಹೊಡೆದಿದ್ದಾರೆ.
ಕೆಲವು ದಿನಗಳ ಹಿಂದೆ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು ಎಂದಿದ್ದ ಅತುಲಗಮಗೆ ಈಗ ಅದೆಲ್ಲಾ ನನ್ನ ಅನುಮಾನವಾಗಿತ್ತಷ್ಟೇ ಎಂದಿದ್ದಾರೆ.
ಅತುಲಗಮಗೆ ಆರೋಪದ ಬಗ್ಗೆ ಶ್ರೀಲಂಕಾ ಕ್ರಿಕೆಟಿಗರೇ ತೀವ್ರ ಟೀಕೆ ಮಾಡಿದ್ದರು. ಅದಾದ ಬಳಿಕ ಇದೀಗ ಮತ್ತೆ ಅವರು ತಮ್ಮ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದು, ಅದು ನನ್ನ ಅನುಮಾನವಾಗಿತ್ತು. ಅದಕ್ಕೆ ನಾನು ಐಸಿಸಿ ಮುಂದೆ ಲಿಖಿತ ರೂಪದಲ್ಲಿ ದೂರು ನೀಡಿದ್ದೆ ಎಂದು ಅತುಲಗಮಗೆ ಹೇಳಿದ್ದಾರೆ.