ಶ್ರೀಲಂಕಾ ಸರಣಿಗೆ ತೆರಳುವ ಬಗ್ಗೆ ನಿರ್ಧರಿಸದ ಬಿಸಿಸಿಐ

ಬುಧವಾರ, 20 ಮೇ 2020 (09:04 IST)
ಮುಂಬೈ: ಏಕದಿನ ಮತ್ತು ಟಿ20 ಸರಣಿ ಆಡಲು ಟೀಂ ಇಂಡಿಯಾಗೆ ಶ್ರೀಲಂಕಾ ಇತ್ತೀಚೆಗಷ್ಟೇ ಆಫರ್ ನೀಡಿತ್ತು. ಆದರೆ ಕೊರೋನಾದಿಂದಾಗಿ ಬಿಸಿಸಿಐ ಏನನ್ನೂ ನಿರ್ಧರಿಸುವ ಸ್ಥಿತಿಯಲ್ಲಿಲ್ಲ.


ಲಂಕಾದಲ್ಲಿ ಜುಲೈ ಕೊನೆಯಲ್ಲಿ ಸೀಮಿತ ಓವರ್ ಗಳ ಸರಣಿ ಆಡಲು ಪ್ರವಾಸ ಮಾಡುವಂತೆ ಲಂಕಾ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಪತ್ರ ಬರೆದಿತ್ತು. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಬಿಸಿಸಿಐ ಏನನ್ನೂ ನಿರ್ಧರಿಸುವ ಸ್ಥಿತಿಯಲ್ಲಿಲ್ಲ.

ಭಾರತದಲ್ಲಿ ಕೊರೋನಾ ದಿನೇ ದಿನೇ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಿಮಾನ ಯಾನಕ್ಕೆ ಕೇಂದ್ರ ಒಪ್ಪಿಗೆ ನೀಡದು. ಹೀಗಾಗಿ ಈ ಪರಿಸ್ಥಿತಿಯಲ್ಲಿ ವಿದೇಶ ಪ್ರವಾಸ ಮಾಡಲು ಟೀಂ ಇಂಡಿಯಾಗೂ ಅನುಮತಿ ಸಿಗುವುದು ಕಷ್ಟ. ಜತೆಗೆ ಆಟಗಾರರಿಗೂ ಇದು ಅಪಾಯ ಮೈಮೇಲೆಳೆದುಕೊಳ್ಳುವ ವಿಚಾರ. ಹೀಗಾಗಿ ಈ ಸರಣಿ ಅನಿಶ್ಚಿತತೆಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲಂಚ ಕೊಡಲು ನಿರಾಕರಿಸಿದ ತಂದೆ: ತಂಡಕ್ಕೆ ಆಯ್ಕೆಯಾಗದ ವಿರಾಟ್ ಕೊಹ್ಲಿ!