ಮುಂಬೈ: ಕೇಂದ್ರ ಗೃಹ ಸಚಿವಾಲಯ ಲಾಕ್ ಡೌನ್ 4 ರ ನಿಯಮಾವಳಿಗಳನ್ನು ಪ್ರಕಟಿಸಿದ್ದು, ಅದರಂತೆ ಮುಚ್ಚಿನ ಕ್ರೀಡಾಂಗಣದಲ್ಲಿ ಕ್ರೀಡಾಕೂಟಕ್ಕೆ ಅನುಮತಿ ನೀಡಲಾಗಿದೆ. ಇದು ಐಪಿಎಲ್ ಆಯೋಜಕರಲ್ಲಿ ಹೊಸ ಭರವಸೆ ಮೂಡಿಸಿದೆ.
									
										
								
																	
ಕೇಂದ್ರದ ಹೊಸ ಮಾರ್ಗಸೂಚಿಯ ಅನ್ವಯ ಖಾಲಿ ಮೈದಾನದಲ್ಲಿ ಪಂದ್ಯ ನಡೆಸಬಹುದಾಗಿದೆ. ಹೀಗಾಗಿ ಬಿಸಿಸಿಐ ಭಾರೀ ನಷ್ಟ ತಪ್ಪಿಸಲು ಖಾಲಿ ಮೈದಾನದಲ್ಲಿ ಐಪಿಎಲ್ ಆಯೋಜಿಸಿದರೂ ಅಚ್ಚರಿಯಿಲ್ಲ. ಟಿವಿ ನೇರಪ್ರಸಾರ ಹಕ್ಕು, ಪ್ರಾಯೋಜಕರಿಂದ ತಕ್ಕಮಟ್ಟಿಗೆ ಆದಾಯ ಬಂದರೂ ಭಾರೀ ನಷ್ಟ ತಪ್ಪಿಸಬಹುದಾಗಿದೆ.
									
			
			 
 			
 
 			
			                     
							
							
			        							
								
																	ಐಪಿಎಲ್ ಅಲ್ಲದೆ, ದೇಶೀಯ ಕ್ರಿಕೆಟ್ ಟೂರ್ನಿಗಳು, ಕ್ರಿಕೆಟೇತರ ಕ್ರೀಡೆಗಳನ್ನು ಖಾಲಿ ಮೈದಾನದಲ್ಲಿ ಆಯೋಜಿಸಲು ಇದರಿಂದ ಅನುಕೂಲವಾಗಲಿದೆ.