ಟಿ20 ವಿಶ್ವಕಪ್ ಮುಂದೂಡಿದರೆ ಐಪಿಎಲ್ ನಡೆಯಲಿದೆ!

ಸೋಮವಾರ, 18 ಮೇ 2020 (09:12 IST)
ಮುಂಬೈ: ಅಕ್ಟೋಬರ್-ನವಂಬರ್ ತಿಂಗಳ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಈಗ ಕೊರೋನಾದಿಂದಾಗಿ ಅನಿಶ್ಚಿತತೆಯಲ್ಲಿದೆ. ಆದರೆ ಈ ಟೂರ್ನಿ ಮುಂದೂಡಿಕೆಯಾದರೆ ಐಪಿಎಲ್ ಗೆ ಲಾಭವಾಗಲಿದೆ!

 

ಹೀಗಂತ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ಟೇಲರ್ ಹೇಳಿದ್ದಾರೆ. ವಿಶ್ವಕಪ್ ಎಂದ ತಕ್ಷಣ ವಿಶ್ವದ ಏಳು ರಾಷ್ಟ್ರಗಳ ತಂಡಗಳು, ಅಭಿಮಾನಿಗಳು ಆಸ್ಟ್ರೇಲಿಯಾಕ್ಕೆ ಬರುತ್ತಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಇಷ್ಟು ದೊಡ್ಡ ಬಳಗವನ್ನು ನಿಭಾಯಿಸುವುದು ಕಷ್ಟ. ಹೀಗಾಗಿ ಟಿ20 ಟೂರ್ನಮೆಂಟ್ ಮುಂದೂಡಬೇಕಾಗುತ್ತದೆ.

ಆ ವೇಳೆಯಲ್ಲಿ ಐಪಿಎಲ್ ಆಯೋಜಿಸಬಹುದು. ವಿದೇಶೀ ಆಟಗಾರರು ಐಪಿಎಲ್ ನಲ್ಲಿ ಭಾಗವಹಿಸುವುದು ಬಿಡುವುದು ಅವರವರಿಗೆ ಬಿಟ್ಟಿದ್ದು ಎಂದು ಟೇಲರ್ ಹೇಳಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಈ ರೀತಿ ನಡೆದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಾಶ್ಮೀರ ವಿವಾದ ಕೆಣಕಿದ ಶಾಹಿದ್ ಅಫ್ರಿದಿಗೆ ತಿರುಗೇಟು ಕೊಟ್ಟ ಗೌತಮ್ ಗಂಭೀರ್