ಐಪಿಎಲ್ ಆಯೋಜಿಸದೇ ಇದ್ದರೆ ಬಿಸಿಸಿಐಗೆ ಎಷ್ಟು ದೊಡ್ಡ ಲಾಸ್ ಗೊತ್ತಾ?

ಶನಿವಾರ, 16 ಮೇ 2020 (09:15 IST)
ಮುಂಬೈ: ಈ ಬಾರಿ ಕೊರೋನಾದಿಂದಾಗಿ ಇದುವರೆಗೆ ಐಪಿಎಲ್ ಆವೃತ್ತಿ 13 ರನ್ನು ಆಯೋಜಿಸಲು ಬಿಸಿಸಿಐಗೆ ಸಾಧ‍್ಯವಾಗಿಲ್ಲ. ಆದರೆ ಇದು ಬಿಸಿಸಿಐಗೆ ಆರ್ಥಿಕವಾಗಿ ದೊಡ್ಡ ಹೊಡೆತ ನೀಡಲಿದೆ.


ಬಿಸಿಸಿಐ ಅಧ‍್ಯಕ್ಷ ಗಂಗೂಲಿ ಈ ಬಗ್ಗೆ ಹೇಳಿದ್ದು, ಒಂದು ವೇಳೆ ಈ ಬಾರಿಯ ಐಪಿಎಲ್ ನಡೆಯದೇ ಹೋದರೆ ಬಿಸಿಸಿಐಗೆ 4000 ಕೋಟಿ ರೂ. ನಷ್ಟವಾಗಲಿದೆ ಎಂದಿದ್ದಾರೆ.

‘ನಾವು ನಮ್ಮ ಹಣಕಾಸು ಸ್ಥಿತಿ ಬಗ್ಗೆ ಅವಲೋಕಿಸಬೇಕಿದೆ. ನಮ್ಮ ಬಳಿ ಎಷ್ಟು ಹಣವಿದೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಐಪಿಎಲ್ ನಡೆಯದೇ ಹೋದರೆ 4000 ಕೋಟಿ ರೂ. ನಷ್ಟವಾಗಲಿದೆ. ಆ ನಷ್ಟವನ್ನು ವೇತನ ಕಡಿತ, ಮತ್ತಿತರ ಮಾರ್ಗಗಳ ಮೂಲಕ ನಾವು ವಾಪಸ್ ಪಡೆಯಲೇಬೇಕು. ಇಲ್ಲವಾದರೆ ಕಷ್ಟಕ್ಕೆ ಬೀಳಲಿದ್ದೇವೆ’ ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೊದಲು ಐಪಿಎಲ್, ಆಮೇಲೆ ವಿಶ್ವಕಪ್ ಎಂದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ