Publish Date: Fri, 15 May 2020 (09:46 IST)
Updated Date: Fri, 15 May 2020 (09:48 IST)
ಮುಂಬೈ: ಕೊರೋನಾದಿಂದಾಗಿ ಕ್ರೀಡಾ ಜಗತ್ತು ಸ್ತಬ್ಧವಾಗಿದೆ. ಆದರೆ ಇದೀಗ ಒಂದೊಂದಾಗಿ ಪುನರಾರಂಭವಾಗುವ ಮಾತು ಕೇಳಿಬರುತ್ತಿದೆ. ಈ ನಡುವೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕ್ರಿಕೆಟ್ ಪುನರಾರಂಭದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೊದಲು ಐಪಿಎಲ್, ದೇಶೀಯ ಕ್ರೀಡೆಗಳು ಆರಂಭವಾಗಲಿ. ಆ ಬಳಿಕವೇ ಟಿ20 ವಿಶ್ವಕಪ್ ಆರಂಭವಾಗಲಿ ಎಂದು ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ.
‘ಸದ್ಯಕ್ಕೆ ಕ್ರೀಡಾಕೂಟ ನಡೆಯುವುದಕ್ಕೆ ನಾನು ಒತ್ತಾಯ ಹೇರುವುದಿಲ್ಲ. ಒಂದು ವೇಳೆ ಆರಂಭವಾಗುವುದಿದ್ದರೆ ಮೊದಲು ದೇಶೀಯ ಕ್ರಿಕೆಟ್, ಐಪಿಎಲ್, ಬಳಿಕ ಉಭಯ ದೇಶಗಳ ಸರಣಿ ನಡೆಯಲಿ. ಬಳಿಕವೇ ವಿಶ್ವಕಪ್ ಆರಂಭವಾಗಲಿ. ವಿದೆಶ ಪ್ರವಾಸಕ್ಕಿಂತ ದೇಶದೊಳಗೇ ಯಾತ್ರೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಸುರಕ್ಷಿತ’ ಎಂದು ರವಿಶಾಸ್ತ್ರಿ