ಮುಂಬೈ: ಟೀಂ ಇಂಡಿಯಾ ಕೋಚ್ ಆಗಿರುವ ವಿಕ್ರಮ್ ರಾಥೋರ್ ಅವರ ಯೋಗ್ಯತೆಯೇನು ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಪ್ರಶ್ನಿಸಿದ್ದಾರೆ.
‘ವಿಕ್ರಮ್ ನನ್ನ ಗೆಳೆಯ. ಆದರೆ ಈಗಿನ ಟಿ20 ಯುಗದ ಆಟಗಾರರಿಗೆ ಕೋಚಿಂಗ್ ಮಾಡಲು ಅವರಿಗೆ ಏನು ಯೋಗ್ಯತೆಯಿದೆಯೇ? ಈ ಮಾದರಿ ಕ್ರಿಕೆಟ್ ಅವರು ಆಡಿದ್ದಾರೆಯೇ?’ ಎಂದು ಯುವಿ ವ್ಯಂಗ್ಯ ಮಾಡಿದ್ದಾರೆ.
ಇನ್ನು, ಮುಖ್ಯ ಕೋಚ್ ರವಿಶಾಸ್ತ್ರಿಗೂ ಯುವಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಈಗಿನ ಆಟಗಾರರು ಯಾರ ಸಲಹೆಯನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಬಹುಶಃ ರವಿಶಾಸ್ತ್ರಿ ಕೂಡಾ ಇದನ್ನೇ ಮಾಡುತ್ತಿರಬಹುದು ಎಂದು ಹಾಲಿ ಮುಖ್ಯ ಕೋಚ್ ಯಾರಿಗೂ ಕೋಚಿಂಗ್ ಮಾಡುತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.