ಮುಂಬೈ: ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಆಧುನಿಕ ಕ್ರಿಕೆಟ್ ಜಗತ್ತಿನ ಟಾಪ್ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಿಪ್ಪ ರೋಹಿತ್ ತಾನು ಯಾವಾಗ ನಿವೃತ್ತಿಯಾಗುವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ನಲ್ಲಿ ರೋಹಿತ್ ತಾವು 38-39 ವರ್ಷಕ್ಕೆ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ. ಈಗ ರೋಹಿತ್ ಗೆ 33 ವರ್ಷ ವಯಸ್ಸು. ಅಂದರೆ ಇನ್ನೂ ಐದು ವರ್ಷ ಕ್ರಿಕೆಟ್ ಆಡುವುದಾಗಿ ಹೇಳಿದ್ದಾರೆ.
2007 ರಲ್ಲಿ ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಸೀಮಿತ ಓವರ್ ಕ್ರಿಕೆಟ್ ನಲ್ಲಿ ಮೊದಲೇ ಚೊಚ್ಚಲ ಪಂದ್ಯವಾಡಿದ್ದರೂ ಟೆಸ್ಟ್ ಕ್ರಿಕೆಟ್ ಗೆ ಅವರು ಕಾಲಿಟ್ಟಿರುವುದು ತೀರಾ ಇತ್ತೀಚೆಗೆ.