Publish Date: Fri, 15 May 2020 (08:59 IST)
Updated Date: Fri, 15 May 2020 (09:01 IST)
ಮುಂಬೈ: ಕೊರೋನಾವೈರಸ್ ನಿಂದಾಗಿ ಕ್ರಿಕೆಟಿಗರು ಜಿಮ್ ಗೂ ತೆರಳದೇ ಮನೆಯಲ್ಲಿ ಕೂರುವಂತಾಗಿದೆ. ಅಭ್ಯಾಸ ಮಾಡಿ ಎಷ್ಟೋ ದಿನಗಳಾಗಿವೆ. ಹೀಗಿರುವಾಗ ಬಿಸಿಸಿಐ ಹೇಳಿಕೆಯೊಂದನ್ನು ನೀಡಿದೆ.
ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೂ ಕ್ರಿಕೆಟ್ ಪಂದ್ಯಗಳು ನಡೆಯಲ್ಲ. ಮೇ 18 ರಿಂದ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಾಗಲಿದೆ. ಆ ವೇಳೆ ಸರ್ಕಾರವೇನಾದರೂ ಕಟ್ಟುನಿಟ್ಟು ಸಡಿಲಗೊಳಿಸಿದರೆ ಹೊರಾಂಗಣ ಅಭ್ಯಾಸಕ್ಕೆ ಅವಕಾಶ ನೀಡುವುದಾಗಿ ಬಿಸಿಸಿಐ ಹೇಳಿದೆ.
ಇಷ್ಟು ದಿನ ಮನೆಯಲ್ಲೇ ಇದ್ದ ಕ್ರಿಕೆಟಿಗರಿಗೆ ಈಗ ಕೆಲವು ದಿನ ಅಭ್ಯಾಸ ಬೇಕೇ ಬೇಕು. ಹೀಗಾಗಿ ಒಂದು ವೇಳೆ ನಿಯಮಗಳಲ್ಲಿ ಸಡಿಲಿಕೆಯಾದರೆ ತಮ್ಮ ಮನೆಯ ಬಳಿಯಿರುವ ಕ್ರಿಕೆಟ್ ಮೈದಾನದಲ್ಲಿ ನೆಟ್ ಪ್ರಾಕ್ಟೀಸ್ ಮಾಡಬಹುದು ಎಂದು ಬಿಸಿಸಿಐ ಮೂಲಗಳು ಹೇಳಿವೆ.