Publish Date: Thu, 14 May 2020 (17:13 IST)
Updated Date: Thu, 14 May 2020 (17:14 IST)
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಎರಡನೇ ಹಂತದ ಪ್ಯಾಕೇಜ್ ನಲ್ಲಿ ಲಾಕ್ ಡೌನ್ ನಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ನೆರವಾಗುವ ಯೋಜನೆ ಪ್ರಕಟಿಸಿದೆ.
ಉದ್ಯೋಗ ಕಳೆದುಕೊಂಡವರಿಗೆ ಸರ್ಕಾರದ ವತಿಯಿಂದ ಮರುಕೌಶಲ್ಯ ತರಬೇತಿ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ. ಇನ್ನು ವಲಸೆ ಕಾರ್ಮಿಕರಿಗೆ ಕನಿಷ್ಠ ವೇತನ, ಮಹಿಳೆಯರಿಗೆ ರಾತ್ರಿ ಪಾಳಯದ ಕೆಲಸ ಮಾಡಲು ಹೊಸ ಕಾನೂನು ತರಲಿದ್ದೇವೆ ಎಂದು ಸಚಿವೆ ಘೋಷಿಸಿದ್ದಾರೆ.