Publish Date: Thu, 14 May 2020 (17:19 IST)
Updated Date: Thu, 14 May 2020 (17:21 IST)
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಎರಡನೇ ಹಂತದ ಪ್ಯಾಕೇಜ್ ನಲ್ಲಿ ರೈತರಿಗೆ ಬಂಪರ್ ಯೋಜನೆ ಪ್ರಕಟಿಸಿದ್ದಾರೆ.
ಸಣ್ಣ ರೈತರಿಗೆ ಮೇ 31 ರವರೆಗಿನ ಸಾಲದ ಬಡ್ಡಿ ಮನ್ನಾ ಮಾಡಲಾಗಿದೆ. ಕಿಸಾನ್ ಕ್ರೆಡಿಟ್ ನ್ನು ಮೀನುಗಾರಿಕೆ ಮತ್ತು ಹೈನುಗಾರಿಕೆ ಮಾಡುವವರಿಗೂ ವಿಸ್ತರಣೆ ಮಾಡಲಾಗಿದೆ. ಇದು 2.5 ಕೋಟಿ ರೈತರಿಗೆ ನೆರವಾಗಲಿದೆ. ನಬಾರ್ಡ್ ಗೆ ಹೆಚ್ಚುವರಿಯಾಗಿ 30 ಸಾವಿರ ಕೋಟಿ ತುರ್ತು ಸಾಲ ನೀಡಲಾಗುವುದು.
ಬೀದಿ ಬದಿ ವ್ಯಾಪಾರಿಗಳಿಗೆ ಸುಲಭವಾಗಿ ಸಾಲ ಸಿಗುವಂತೆ ಮಾಡಲು 5 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಇದರಿಂದ 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.