ತವರಿನಲ್ಲೇ ಕ್ರಿಕೆಟಿಗರಿಗೆ ತರಬೇತಿ: ಬಿಸಿಸಿಐ ನಿರ್ಧಾರ

ಮಂಗಳವಾರ, 19 ಮೇ 2020 (09:06 IST)
ಮುಂಬೈ: ಕೇಂದ್ರ ಸರ್ಕಾರ ಲಾಕ್ ಡೌನ್ 4 ರಲ್ಲಿ ಕ್ರೀಡಾಂಗಣ ತೆರೆಯಲು ಅವಕಾಶ ನೀಡಿದೆದಯಾದರೂ ಬಿಸಿಸಿಐ ಅವಸರದಲ್ಲಿ ತೀರ್ಮಾನಕ್ಕೆ ಬರದೇ ಇರಲು ನಿರ್ಧರಿಸಿದೆ.


ಕಳೆದ ಕೆಲವು ದಿನಗಳಿಂದ ಅಭ್ಯಾಸ ನಡೆಸದ ಕ್ರಿಕೆಟಿಗರನ್ನು ಮುಂಬರುವ ಸರಣಿಗಳಿಗೆ ತಯಾರು ಮಾಡಲು ತರಬೇತಿ ಪ್ರಾರಂಭಿಸಬಹುದು ಎಂದು ಲೆಕ್ಕಾಚಾರ ನಡೆಸಲಾಗಿತ್ತು.

ಆದರೆ ಇದೀಗ ತನ್ನ ಗುತ್ತಿಗೆ ಪಟ್ಟಿಯಲ್ಲಿರುವ ಕ್ರಿಕೆಟಿಗರಿಗೆ ತಮ್ಮ ತಮ್ಮ ತವರಿನಲ್ಲೇ ನೆಟ್ ಪ್ರಾಕ್ಟೀಸ್ ಮಾಡಲು ಅವಕಾಶ ನೀಡುವುದಾಗಿ ಹೇಳಿದೆ. ಈ ಬಗ್ಗೆ ಆಯಾ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಜತೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಸದ್ಯಕ್ಕೆ ವಿಮಾನ, ರೈಲು ಯಾನ ರದ್ದುಗೊಳಿಸಿರುವುದರಿಂದ ಕ್ರಿಕೆಟಿಗರಿಗೆ ಬೇರೆ ಊರುಗಳಿಗೆ ತೆರಳಲು ಸಾಧ್ಯವಾಗದು. ಹೀಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅನುಷ್ಕಾ ಸಿನಿಮಾ ಸೆಟ್ ಗೆ ಬಂದು ನಿದ್ದೆ ಮಾಡಿದ್ದ ವಿರಾಟ್ ಕೊಹ್ಲಿ!