ಭಾರತದಲ್ಲಿ ಟಿಕ್ ಟಾಕ್ ಬ್ಯಾನ್; ಈ ಬಗ್ಗೆ ಟಿಕ್ ಟಾಕ್ ಸಂಸ್ಥೆ ಪ್ರತಿಕ್ರಿಯೆ ಏನು?

ಮಂಗಳವಾರ, 30 ಜೂನ್ 2020 (10:17 IST)
ಚೀನಾ : ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಮಾಡಿದ ಹಿನ್ನಲೆಯಲ್ಲಿ  ಟಿಕ್ ಟಾಕ್ ಸಂಸ್ಥೆ ಹೇಳಿಕೆಯೊಂದನ್ನು ರಿಲೀಸ್ ಮಾಡಿದೆ.

ಭಾರತೀಯರ ಗೌಪ್ಯತೆಯನ್ನು ಕಾಪಾಡುವಲ್ಲಿ ಹಾಗೂ ಡಾಟಾ ಸುರಕ್ಷತೆಯ ವಿಚಾರದಲ್ಲಿ ನಿಯಮ ಉಲ್ಲಂಘಿಸಿದೆ ಎಂದು ಆರೋಪಿಸಿ ಭಾರತದಲ್ಲಿ ಟಿಕ್ ಟಾಕ್ ಸೇರಿದಂತೆ 59 ಆ್ಯಪ್ ನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.

ಆ್ಯಪ್ ನಿಷೇಧದ ಬಳಿಕ ಹೇಳಿಕೆ ರಿಲೀಸ್ ಮಾಡಿದ ಟಿಕ್ ಟಾಕ್,  ಚೀನಾ ಸರ್ಕಾರದ ಜತೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಟಿಕ್ ಟಾಕ್ ಆ್ಯಪ್ ಬಳಕೆದಾರರ ಮಾಹಿತಿ ಸುರಕ್ಷಿತವಾಗಿದೆ ಎಂದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊರೊನಾಗೆ ವಿಧಾನಸೌಧದ ನೌಕರ ಬಲಿ