ಭಾರತ-ಚೀನಾ ಸಂಘರ್ಷದ ನಡುವೆ ವಾಯುಸೇನೆಗೆ ರಾಫೆಲ್ ಯುದ್ಧವಿಮಾನಗಳ ಆಗಮನ

ಮಂಗಳವಾರ, 30 ಜೂನ್ 2020 (09:15 IST)
ನವದೆಹಲಿ: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಭಾರತೀಯ ವಾಯುಸೇನೆಗೆ ಬಲ ತುಂಬಲು ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನಗಳ ಆಗಮನವಾಗಲಿದೆ.

 

ಜುಲೈ 6 ರಂದು ಹರ್ಯಾಣದ ಅಂಬಾಲ ಜೆಟ್ ಬೇಸ್ ಗೆ ರಾಫೆಲ್ ಯುದ್ಧ ವಿಮಾನಗಳು ಆಗಮಿಸಲಿವೆ ಎನ್ನಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ರಾಫೆಲ್ ಯುದ್ಧ ವಿಮಾನಗಳು ವಾಯುಸೇನೆಗೆ ಇನ್ನಷ್ಟು ಬಲ  ತುಂಬಲಿವೆ.

ಚೀನಾ ಜತೆಗೆ ಸಂಘರ್ಷವಾದ ಬೆನ್ನಲ್ಲೇ ಭಾರತ ರಾಫೆಲ್ ಯುದ್ಧ ವಿಮಾನಗಳನ್ನು ಆದಷ್ಟು ಬೇಗ ಕಳುಹಿಸಿಕೊಡುವಂತೆ ಫ್ರಾನ್ಸ್ ಗೆ ಮನವಿ ಮಾಡಿತ್ತು. ಸದ್ಯಕ್ಕೆ ಆರು ರಾಫೆಲ್ ಯುದ್ಧ ವಿಮಾನಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿವೆ. ಉಳಿದವು ಸದ್ಯದಲ್ಲೇ ರೆಡಿಯಾಗಿ ಭಾರತೀಯ ವಾಯುಸೇನೆಗೆ ಸೇರ್ಪಡೆಯಾಗಲಿವೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದು ಅನ್ ಲಾಕ್ 1 ಅಂತ್ಯವಾಗುವ ಹಿನ್ನಲೆ; ಸಂಜೆ 4 ಗಂಟೆಗೆ ಪ್ರಧಾನಿ ಮೋದಿ ಭಾಷಣ