ಲಡಾಖ್ ನಲ್ಲಿ ಚೀನಾಕ್ಕೆ ತಿರುಗೇಟು ಕೊಡಲು ವಾಯುಪಡೆ ಸನ್ನದ್ಧಗೊಳಿಸಿದ ಭಾರತ

ಭಾನುವಾರ, 28 ಜೂನ್ 2020 (09:50 IST)
ನವದೆಹಲಿ: ಮಾತುಕತೆಯ ಬಳಿಕವೂ ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ತಕಾರಾರು ಮುಗಿದಿಲ್ಲ. ಚೀನಾ ವಾಯುಪಡೆ ತನ್ನ ಶಸ್ತ್ರಾಸ್ತ್ರ ಸಂಗ್ರಹಣೆ ಮಾಡುತ್ತಿರುವಂತೆಯೇ ಭಾರತವೂ ತಿರುಗೇಟು ಕೊಡಲು ಪೂರ್ವ ಲಡಾಕ್ ನಲ್ಲಿ ವಾಯು ಸೇನೆ ಸನ್ನದ್ಧಗೊಳಿಸಿದೆ.


ಒಂದು ವೇಳೆ ಯುದ್ಧ ನಡೆದ ಚೀನಾ ಪಾಕಿಸ್ತಾನದ ಸಹಾಯದೊಂದಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತನ್ನ ವಾಯು ಸೇನೆ ನೆಲೆಯನ್ನು ಸ್ಥಾಪಿಸಿ ಭಾರತದ ವಿರುದ್ಧ ದಾಳಿ ಮಾಡುವ ಸಾಧ‍್ಯತೆಯಿದೆ. ಇದನ್ನು ಅರಿತಿರುವ ಭಾರತ ಕಟ್ಟೆಚ್ಚರ ವಹಿಸಿದೆ. ಇದೀಗ ಎರಡೂ ದೇಶಗಳು ಗಡಿಯಲ್ಲಿ ತಮ್ಮ ಸೇನೆ, ಶಸ್ತ್ರಾಸ್ತ್ರ ಜಮಾವಣೆ ಹೆಚ್ಚಿಸಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಜ್ಯದಲ್ಲಿನ್ನು ಪ್ರತೀ ಸಂಡೇ ಕರ್ಫ್ಯೂ: ಕೊರೋನಾ ತಡೆಯಲು ಹೊಸ ಮಾರ್ಗ