ದುಬೈ: ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಆದರೆ ಇದಕ್ಕೂ ಮೊದಲು ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಕ್ರಿಸ್ ಗೇಲ್ ಪಾರ್ಟಿಯೊಂದರಲ್ಲಿ ಭಾಗವಹಿಸಿ ಆತಂಕ ತಂದಿದ್ದಾರೆ.
ಉಸೇನ್ ಬೋಲ್ಟ್ ಆಯೋಜಿಸಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಕ್ರಿಸ್ ಗೇಲ್ ಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಆದರೆ ಸದ್ಯಕ್ಕೆ ವರದಿ ನೆಗೆಟಿವ್ ಎಂದು ಬಂದಿದೆ. ಗೇಲ್ ಇನ್ನೂ ಎರಡು ಬಾರಿ ಕೊರೋನಾ ಪರಿಕ್ಷೆಗೊಳಗಾಗಲಿದ್ದು, ಒಂದು ವೇಳೆ ಪೊಸಿಟಿವ್ ಬಂದರೆ ಅವರ ಐಪಿಎಲ್ ಕನಸು ಭಗ್ನವಾಗಲಿದೆ.